ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಉದ್ದಗಲಕ್ಕೂ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಧಾನ್ಯವನ್ನು ಮನೆ ಬಾಗಿಲಿಗೆ ತಲುಪಿಸಿದವರೆಷ್ಟೋ. ವೈಯಕ್ತಿಕವಾಗಿ, ಸಂಘಟನೆ ಮೂಲಕ ಕಷ್ಟದಲ್ಲಿರುವವರಿಗೆ ನೆರವಾದರು.
ಇದೀಗ ಕೋವಿಡ್ ಎರಡನೇ ಅಲೆ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ವೇಳೆ ಸಹ ಜನ ಪರಸ್ಪರ ನೆರವಿಗೆ ನಿಂತಿದ್ದಾರೆ. ಮನೆಯಲ್ಲೇ ಐಸೋಲೇಷನ್ ಆದ ಕೋವಿಡ್ ಸೋಂಕಿತರಿಗೆ ಸಿದ್ಧ ಆಹಾರ ಮನೆಬಾಗಿಲಿಗೆ ತಲುಪಿಸುವ ಕೆಲಸ ಆರಂಭಿಸಿದ್ದಾರೆ.
ಎಟಿಎಂನಲ್ಲಿ ಅಚಾನಕ್ಕಾಗಿ ಬಂತು ಹಣ; ಪುಟ್ಟ ಹುಡುಗನ ಪ್ರಾಮಾಣಿಕತೆಗೆ ಒಲಿದ ಬಹುಮಾನ
ದೆಹಲಿ, ಮುಂಬೈ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ಸೇರಿ ಪ್ರಮುಖ ನಗರಗಳಲ್ಲಿ ಈ ಚಟುವಟಿಕೆ ನಡೆದಿದೆ. ಇಂತಹ ಮೆಸೇಜ್‌ಗಳ ರಾಶಿ ಕಾಣ ಸಿಗುತ್ತಿದೆ, ಪರಸ್ಪರ ನೆರವಾಗುವುದನ್ನೂ ಸಹ ಕಾಣಬಹುದಾಗಿದೆ.
ಕೆಲವರು ಈ ಅವಕಾಶವನ್ನು ಉದ್ಯಮವಾಗಿಯೂ ಪರಿವರ್ತಿಸಿಕೊಂಡಿದ್ದಾರೆ. ಪ್ಯಾಕೇಜ್ ರೂಪದಲ್ಲಿ ಕ್ಯಾಟರಿಂಗ್ ಉದ್ಯಮವಾಗಿ ರೂಪಿಸಿಕೊಂಡಿದ್ದಾರೆ.