alex Certify ಅಟಲ್​ ಬಿಹಾರಿ ವಾಜಪೇಯಿ ಸೋದರ ಸೊಸೆ ಕೋವಿಡ್​ಗೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಟಲ್​ ಬಿಹಾರಿ ವಾಜಪೇಯಿ ಸೋದರ ಸೊಸೆ ಕೋವಿಡ್​ಗೆ ಬಲಿ

ಮಾಜಿ ಸಂಸದೆ ಹಾಗೂ ಕಾಂಗ್ರೆಸ್​ ಹಿರಿಯ ನಾಯಕಿ ಕರುಣಾ ಶುಕ್ಲಾ ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಪುರದ ಕೇರ್​ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದ್ರು.

ಕರುಣಾ ಶುಕ್ಲಾ, ಭಾರತದ ಮಾಜಿ ಪ್ರಧಾನಿ ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆ ಆಗಿದ್ದಾರೆ. ಎರಡು ಬಾರಿ ಲೋಕಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದ ಕರುಣಾರಿಗೆ 70 ವರ್ಷ ವಯಸ್ಸಾಗಿತ್ತು.

2013ರವರೆಗೆ ಶುಕ್ಲಾ ಬಿಜೆಪಿಯಲ್ಲಿದ್ದರು. ಫೆಬ್ರವರಿ 2014ರಂದು ಅವರು ಕಾಂಗ್ರೆಸ್‌ ಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್​ ಶುಕ್ಲಾರನ್ನ ಬಿಲಾಸ್ಪುರ ಕ್ಷೇತ್ರದಿಂದ ಕಣಕ್ಕೆ ಇಳಿಸಿತ್ತು. ಆದರೆ ಅವರು ಬಿಜೆಪಿಯ ಲಖನ್​ ಲಾಲ್​ ಸಾಹು ವಿರುದ್ಧ ಪರಾಭವಗೊಂಡಿದ್ದರು.

ಹುಟ್ಟಿನಿಂದ ಬೇರ್ಪಟ್ಟ ಅವಳಿಗಳು 36 ವರ್ಷಗಳ ಬಳಿಕ ಭೇಟಿ

2018ರಲ್ಲಿ ಛತ್ತೀಸಗಢ ವಿಧಾನಸಭಾ ಚುನಾವಣೆಯ ವೇಳೆ ರಾಜನಂದ್ಗಾಂವ್​ನಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದರು. ಆದರೆ ಇಲ್ಲಿಯೂ ಸಹ ಬಿಜೆಪಿ ರಮಣ್​ ಸಿಂಗ್​ ವಿರುದ್ಧ ಸೋತಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...