alex Certify BIG NEWS: ಲಸಿಕೆಗಳಿಗಿಂತ ಪ್ರತಿಕಾಯಗಳೇ ಕೊರೊನಾ ವಿರುದ್ಧ ರಾಮಬಾಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಸಿಕೆಗಳಿಗಿಂತ ಪ್ರತಿಕಾಯಗಳೇ ಕೊರೊನಾ ವಿರುದ್ಧ ರಾಮಬಾಣ..!

ಕೊರೊನಾದಿಂದ ಕಂಗೆಟ್ಟಿರುವ ವಿಶ್ವದ ಎಲ್ಲ ರಾಷ್ಟ್ರಗಳು ಕೋವಿಡ್​ ಲಸಿಕೆಗಾಗಿ ಕಾತುರದಿಂದ ಕಾಯುತ್ತಿವೆ. ಕಳೆದ ಎರಡು ವಾರಗಳಲ್ಲಿ ಉತ್ತಮ ಬೆಳವಣಿಗೆ ಎಂಬಂತೆ ಎರಡು ಫಾರ್ಮಾ ಕಂಪನಿಗಳಾದ ಮಾಡರ್ನಾ ಹಾಗೂ ಫೀಜರ್​​ ತಮ್ಮ ಲಸಿಕೆ ಬಳಸಿದ ಸೋಂಕಿತರು ಉತ್ತಮ ಪ್ರತಿಕ್ರಿಯೆ ತೋರಿಸಿದ್ದಾರೆ ಎಂದು ಹೇಳಿದೆ.

ಈ ಲಸಿಕೆಗಳಿಗೆ ಅನುಮೋದನೆ ಸಿಕ್ಕರೆ ವಿಶ್ವಕ್ಕೆ ಅಪ್ಪಳಿಸಿರುವ ಕೊರೊನಾ ವೈರಸ್​​ ಕೊನೆಗಾಣುತ್ತೆ ಎಂಬ ಭರವಸೆ ಜನರಲ್ಲಿ ಮೂಡಿದೆ. ಆದರೆ ಲಸಿಕೆ ಕಂಡು ಹಿಡಿದರಷ್ಟೇ ಸಾಲದು. ಲಸಿಕೆಗಳನ್ನ ಸಂಗ್ರಹಿಸಿಡಲು ಬೇಕಾದ ದುಬಾರಿ ತಂತ್ರಜ್ಞಾನಗಳನ್ನೂ ಭಾರತ ಅಳವಡಿಸಿಕೊಳ್ಳಬೇಕಿದೆ.

ಆದರೆ ಸಿರೋಸರ್ವೇ ಪ್ರಕಾರ ಭಾರತದಲ್ಲಿ ಲಸಿಕೆಗಿಂತ ಹೆಚ್ಚಾಗಿ ಪ್ರತಿಕಾಯಗಳ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರಂತೆ. ಪುಣೆಯ 5 ಕಡೆಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಸೋಂಕಿಗೆ ಒಳಗಾದವರಲ್ಲಿ ಸುಮಾರು 85 ಶೇಕಡಾದಷ್ಟು ಮಂದಿ ರಕ್ಷಣಾತ್ಮಕ ಪ್ರತಿಕಾಯಗಳನ್ನ ತಮ್ಮ ದೇಹದಲ್ಲಿ ಅಭಿವೃದ್ಧಿಪಡಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...