alex Certify ವಿಷಕಾರಿ ಹಾವನ್ನು ದರದರನೆ ಎಳೆದೊಯ್ದ ಅಜ್ಜಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಷಕಾರಿ ಹಾವನ್ನು ದರದರನೆ ಎಳೆದೊಯ್ದ ಅಜ್ಜಿ…!

ಅಜ್ಜಿಯೊಬ್ಬರು ವಿಷಕಾರಿ ಹಾವನ್ನು ಕೈಯಲ್ಲಿ ಹಿಡಿದು ದರದರನೆ ಎಳೆದೊಯ್ದು ದೂರಕ್ಕೆ ಎಸೆದು ವಾಪಸಾಗುವ ವಿಡಿಯೋವೊಂದು ವೈರಲ್ ಆಗಿದೆ.

ಅರಣ್ಯ ಇಲಾಖೆಯ ಅಧಿಕಾರಿ ಸುಸಾಂತ್ ನಂದಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಅದನ್ನು ನಾಗರಹಾವು ಎಂದು ಗುರುತಿಸಿದ್ದಾರೆ. ಈ ವಿಡಿಯೋದಲ್ಲಿ ಅಜ್ಜಿಯು ಅಳುಕಿಲ್ಲದೇ ಹಾವನ್ನು ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಮತ್ತು ವಸತಿ ಪ್ರದೇಶಗಳನ್ನು ದಾಟಿ ಖಾಲಿ ಸ್ಥಳದಲ್ಲಿ ಹಾವನ್ನು ಎಸೆಯುವುದನ್ನು ನೋಡಬಹುದಾಗಿದೆ.

ನೆಟ್ಟಿಗರು ಈ ಅಜ್ಜಿಯ ಧೈರ್ಯವನ್ನು ಮೆಚ್ಚಿ ಕಾಮೆಂಟ್ ಗಳನ್ನು ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಘಟನೆ ಗುಜರಾತಿನ ಒಂದು ಗ್ರಾಮಾಂತರ ಪ್ರದೇಶದಲ್ಲಿ‌ ನಡೆದಿದೆ ಎಂದು ಹೇಳಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...