alex Certify ಮಾನವ ಈ ಮಂಗಗಳಿಂದ ಕಲಿಯಬೇಕು ಪಾಠ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವ ಈ ಮಂಗಗಳಿಂದ ಕಲಿಯಬೇಕು ಪಾಠ…!

ಇಟಾನಗರ: ಕರೋನಾ ಹರಡುತ್ತದೆ ಸಾಮಾಜಿಕ ಅಂತರ ಕಾಪಾಡಿ ಎಂದು ಜನರಿಗೆ ಪದೇ ಪದೇ ಹೇಳಿ ಸರ್ಕಾರಗಳು ಸೋಲುತ್ತಿವೆ. ಆದರೆ, ಕಾಡು ಪ್ರಾಣಿಗಳು ಇದನ್ನು ಕಲಿತುಬಿಟ್ಟಿವೆ.

ಅರುಣಾಚಲ ಪ್ರದೇಶ ದಾರಿಯೊಂದರಲ್ಲಿ ಸುಮಾರು 12 ಮಂಗಗಳು ತಲಾ 1 ಮೀಟರ್ ಅಂತರದಲ್ಲಿ ಎರಡು ಸಾಲಿನಲ್ಲಿ ಅಚ್ಚುಕಟ್ಟಾಗಿ ದೂರ, ದೂರ ಕುಳಿತು ವ್ಯಕ್ತಿಯೊಬ್ಬ ನೀಡುತ್ತಿರುವ ಕಲ್ಲಂಗಡಿ, ಬಾಳೆ ಹಣ್ಣುಗಳನ್ನು ತಿನ್ನುತ್ತಿರುವ ಫೋಟೋವನ್ನು ಕೇಂದ್ರ ಸಚಿವ ಕಿರಣ ರಿಜಿಜು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಅಂತರಕ್ಕೆ ಇದು ಸ್ಪಷ್ಟ ಉದಾಹರಣೆ ಎಂದಿದ್ದಾರೆ ಅವರು. ಜಾಲತಾಣಗಳಲ್ಲಿ‌ ಈ ಫೋಟೋ ಸದ್ದು ಮಾಡುತ್ತಿದೆ. 5,600 ಜನರು‌ ಲೈಕ್ ಮಾಡಿದ್ದು,1 ಸಾವಿರ‌ ಜನರು ಕಮೆಂಟ್ ಮಾಡಿದ್ದಾರೆ. ಅಸ್ಸಾಂ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ಬಲೂಕ್ ಪೋಂಗ್ ಗ್ರಾಮದ ಸಮೀಪ ಖಾಲಿ ದಾರಿಯಲ್ಲಿ ಅರುಪ್‌ ಕಲಿಟಾ ಎಂಬುವವರು ಈ ಫೋಟೋ ಕ್ಲಿಕ್ಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...