alex Certify ರೈಲ್ವೆ ಇಲಾಖೆ ಅದಾನಿ ಒಡೆತನಕ್ಕೆ ಸೇರಿದ್ದಾ..? ಇಲ್ಲಿದೆ ವೈರಲ್​ ಫೋಟೋ ಹಿಂದಿನ ಅಸಲಿ ಸತ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಇಲಾಖೆ ಅದಾನಿ ಒಡೆತನಕ್ಕೆ ಸೇರಿದ್ದಾ..? ಇಲ್ಲಿದೆ ವೈರಲ್​ ಫೋಟೋ ಹಿಂದಿನ ಅಸಲಿ ಸತ್ಯ..!

ಅದಾನಿ ರೈಲ್ವೆ. ರೈಲ್ವೆ ಈಗ ನಮ್ಮ ವೈಯಕ್ತಿಕ ಸಂಪತ್ತು ಎಂದು ಪ್ರಿಂಟ್​ ಮಾಡಲಾದ ಪುಣೆ ಜಂಕ್ಷನ್​​ನ ರೈಲ್ವೆ ಟಿಕೆಟ್​ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದನ್ನ ಮಾಡ್ತಿದೆ.

ಪುಣೆ ಜಂಕ್ಷನ್​ ಈಗ ಅದಾನಿ ಗ್ರೂಪ್​ ಒಡೆತನಕ್ಕೆ ಸೇರಿದೆ ಎಂಬರ್ಥವನ್ನ ಈ ಟಿಕೆಟ್​ ಹೊಂದಿದೆ. ಎನ್​ಡಿಎ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಸಾರ್ವಜನಿಕ ವಲಯದ ಘಟಕಗಳನ್ನ ಖಾಸಗೀಕರಣ ಮಾಡಿದೆ. ಹೀಗಾಗಿ ರೈಲ್ವೆ ಇಲಾಖೆ ಕೂಡ ಖಾಸಗಿಕರಣವಾಗುತ್ತಾ ಎಂಬ ಪ್ರಶ್ನೆ ಈ ಟಿಕೆಟ್​ ಫೋಟೋ ನೋಡಿದ ಅನೇಕರಲ್ಲಿ ಮೂಡಿತ್ತು.

ಎಂ.ಎಂ. ವರ್ಮಾ ಎಂಬವರು ಶನಿವಾರ ಅಂದರೆ ಡಿಸೆಂಬರ್​ 26ರಂದು ಈ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದರು. ಈ ಪೋಸ್ಟ್ ನೋಡಿದ ಅನೇಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನ ಹೊರಹಾಕಿದ್ದರು.

ಆದರೆ ಇದೀಗ ಈ ಟಿಕೆಟ್​ನ ಅಸಲಿ ಬಣ್ಣ ಫ್ಯಾಕ್ಟ್​ ಚೆಕ್​ನಲ್ಲಿ ಬಯಲಾಗಿದೆ. 2020ರ ಸೆಪ್ಟೆಂಬರ್ 11ರಂದು ಪತ್ರಕರ್ತ ಪ್ರಶಾಂತ್​ ಕನೋಜಿಯಾ ಎಂಬವರು ಪುಣೆ ಫ್ಲಾಟ್​ಫಾರಂನ ಟಿಕೆಟ್​ ಫೋಟೋ ಶೇರ್ ಮಾಡೋದ್ರ ಮೂಲಕ ಬೆಲೆ ಏರಿಕೆಯನ್ನ ಖಂಡಿಸಿದ್ದರು. ಇದಕ್ಕೆ ರಿ ಟ್ವೀಟ್​ ಮಾಡಿದ ಭಾರತೀಯ ರೇಲ್ವೆ ಇಲಾಖೆ ವಕ್ತಾರ ಬೆಲೆ ಏರಿಕೆಗೆ ಕಾರಣವನ್ನೂ ನೀಡಿದ್ದರು. ಇದೇ ಟಿಕೆಟ್​​ನ ಫೋಟೋವನ್ನ ಎಡಿಟ್​ ಮಾಡಿ ಅದಕ್ಕೆ ಅದಾನಿ ಗ್ರೂಪ್​ ಎಂದು ಬರೆಯುವ ಮೂಲಕ ಸುಳ್ಳು ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿದೆ ಎಂಬ ಅಂಶ ಫ್ಯಾಕ್ಟ್​ ಚೆಕ್​ನಲ್ಲಿ ಬೆಳಕಿಗೆ ಬಂದಿದೆ.

— Scharada Dubey (@scharada_d) August 17, 2020

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...