alex Certify ಅಮೆರಿಕ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಮನಮೋಹನ್​ ಸಿಂಗ್ ಗೆ ಬಂದಿದೆಯಾ ಆಹ್ವಾನ..? ಇಲ್ಲಿದೆ ವೈರಲ್ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಮನಮೋಹನ್​ ಸಿಂಗ್ ಗೆ ಬಂದಿದೆಯಾ ಆಹ್ವಾನ..? ಇಲ್ಲಿದೆ ವೈರಲ್ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕೆ ಅಮೆರಿಕನ್ನರಷ್ಟೇ ಭಾರತೀಯರು ಸಹ ಕಾತುರರಾಗಿದ್ದು ಎಲ್ಲರಿಗೂ ತಿಳಿದಿರೋ ವಿಚಾರ. ಇದೀಗ ರಿಸಲ್ಪ್​ ಕೂಡ ಹೊರಬಂದಿದ್ದು ಪ್ರಮಾಣ ವಚನ ಸಮಾರಂಭಕ್ಕೆ ಶ್ವೇತ ಭವನದಲ್ಲಿ ಸಿದ್ಧತೆ ಜೋರಾಗಿದೆ.

ಆದರೆ ಪ್ರಮಾಣ ವಚನ ಸಮಾರಂಭಕ್ಕೆ ಭಾರತದ ಯಾವ ಗಣ್ಯರಿಗೆ ಆಹ್ವಾನ ನೀಡಲಾಗುತ್ತೆ ಅನ್ನೋ ವಿಚಾರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.

ಜನವರಿ 20ರೊಳಗೆ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​​ರಿಗೂ ಆಹ್ವಾನ ನೀಡಲಾಗಿದೆ ಎಂಬ ಸುದ್ದಿ ಟ್ವಿಟರ್​ನಲ್ಲಿ ಹರಿದಾಡ್ತಿದೆ.

ಅಮೆರಿಕಾ ಅಧ್ಯಕ್ಷರ ಪದಗ್ರಹಣ ಸಮಾರಂಭ ಬಹಳ ಅದ್ಧೂರಿಯಾಗಿ ನಡೆಯುತ್ತೆ. ಆದರೆ ಈ ಬಾರಿ ಕರೊನಾ ವೈರಸ್ ನ್ನೂ ಗಮನದಲ್ಲಿಟ್ಟುಕ್ಕೊಂಡು ಸಮಾರಂಭವನ್ನ ಆಚರಿಸಬೇಕಾದ ಅನಿರ್ವಾಯತೆ ಇದೆ.

ಅಮೆರಿಕ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಯಾರ್ಯಾರು ಬರಬೇಕು ಅನ್ನೋ ಪಟ್ಟಿಯನ್ನ ಮೊದಲೇ ಸಿದ್ಧಪಡಿಸಲಾಗುತ್ತೆ . ಆದರೆ ಈ ಬಾರಿಯ ಕಾರ್ಯಕ್ರಮಕ್ಕೆ ಆಹ್ವಾನಿತರ ಪಟ್ಟಿ ಇನ್ನೂ ಸಿದ್ದವಾಗಿಲ್ಲ. ಹೀಗಾಗಿ ಮನಮೋಹನ್​ ಸಿಂಗ್​ಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂಬ ಸುದ್ದಿ ಸುಳ್ಳು ಅನ್ನೋದು ಫ್ಯಾಕ್ಟ್ ಚೆಕ್​ನಲ್ಲಿ ಬಯಲಾಗಿದೆ.

— Shah Nawaz Khaki,???? (@NawazKhaki) November 8, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...