alex Certify ಪತಂಜಲಿಯ ‌ʼಕೊರೊನಿಲ್ʼ ಗೆ ಸಿಕ್ಕಿದೆಯಾ WHO ಅನುಮತಿ…? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಂಜಲಿಯ ‌ʼಕೊರೊನಿಲ್ʼ ಗೆ ಸಿಕ್ಕಿದೆಯಾ WHO ಅನುಮತಿ…? ಇಲ್ಲಿದೆ ವೈರಲ್‌ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ನವದೆಹಲಿ : ಪತಂಜಲಿ ಆಯುರ್ವೇದ ಸಂಸ್ಥೆ ತಯಾರಿಸಿದ ಕೊರೊನಾ ಔಷಧ ಕೊರೊನಿಲ್ ಗೆ ಭಾರತ ಸರ್ಕಾರದಿಂದ ಹಾಗೂ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) ದಿಂದ ಅನುಮತಿ ಸಿಕ್ಕಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದರು. ಔಷಧಿ ಕೋವಿಡ್ ವಿರುದ್ಧ ರೋಗ ನಿರೋಧಕತೆ ಹೆಚ್ಚಿಸಲು ಹೆಚ್ಚು ಪರಿಣಾಮಕಾರಿಯಾಗಿದೆ. ಪತಂಜಲಿ 150 ದೇಶಗಳಿಗೆ ಅದನ್ನು ವಿತರಣೆ ಮಾಡಲಿದೆ ಎಂದು ತಿಳಿಸಿದ್ದರು.

ಆದರೆ, ವಿಶ್ವ ಆರೋಗ್ಯ ಸಂಸ್ಥೆ ಆಗ್ನೇಯ ಏಷ್ಯಾ ಘಟಕ ಸೋಮವಾರ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ. ಸಂಸ್ಥೆಯು ಯಾವುದೇ ಸಾಂಪ್ರದಾಯಿಕ ಔಷಧಿಯನ್ನು ವಿಮರ್ಶೆ ಮಾಡಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದು ತಿಳಿಸಿದೆ.

ಮೆಚ್ಚುಗೆಗೆ ಪಾತ್ರವಾಗಿದೆ ಮದುವೆಯಾದ ಮರುಕ್ಷಣ ನವ ದಂಪತಿ ಮಾಡಿದ ಕಾರ್ಯ

ಅದೇ ದಿನ ಪತಂಜಲಿ ಆಯುರ್ವೇದ ಸಂಸ್ಥೆಯ ಎಂಡಿ ಆಚಾರ್ಯ ಬಾಲಕೃಷ್ಣ ಕೂಡ ಸ್ಪಷ್ಟನೆ ನೀಡಿದ್ದಾರೆ. ನಮ್ಮದು ಡಬ್ಲ್ಯುಎಚ್ಒ ಜಿಎಂಪಿ ಕಂಪ್ಲೇಂಟ್ CoPP ಸರ್ಟಿಫಿಕೇಟ್ ಆಗಿದೆ. ಭಾರತ ಸರ್ಕಾರದ ಡಿಸಿಜಿಐನಿಂದ ಕೊರೊನಿಲ್ ಗೆ ಪ್ರಮಾಣಪತ್ರ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಪತಂಜಲಿ ಆಯುರ್ವೇದ ಸಂಸ್ಥೆ 2020 ರ ಜೂನ್ ನಲ್ಲೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧವಾಗಿ ಕೊರೊನಿಲ್ ನ್ನು ಬಿಡುಗಡೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...