alex Certify ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುತ್ತಿಲ್ಲವಾ..? ಹಾಗಿದ್ರೆ ಪ್ರಬಂಧ ಬರೆಯೋಕೆ ರೆಡಿಯಾಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸುತ್ತಿಲ್ಲವಾ..? ಹಾಗಿದ್ರೆ ಪ್ರಬಂಧ ಬರೆಯೋಕೆ ರೆಡಿಯಾಗಿ

ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸುವ ಮಧ್ಯಪ್ರದೇಶದ ಗ್ವಾಲಿಯರ್​ ನಿವಾಸಿಗಳಿಗೆ ಹೊಸ ಶಿಕ್ಷೆಯನ್ನ ನೀಡುತ್ತಿದ್ದಾರೆ. ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ರೋಕೋ – ಟೋಕೋ ಅಭಿಯಾನ ನಡೆಸಲಾಗುತ್ತಿದೆ. ಕೊರೊನಾ ನಿಯಮಗಳನ್ನ ಯಾರಾದರೂ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಅವರನ್ನ ಜೈಲಿನಲ್ಲಿ ಇರಿಸೋದು ಮಾತ್ರವಲ್ಲದೇ ಕೊರೊನಾ ಬಗ್ಗೆ ಪ್ರಬಂಧ ಬರೆಯಲು ನೀಡಲಾಗುತ್ತಿದೆ.

ಶನಿವಾರ ಕನಿಷ್ಟ 20 ಮಂದಿಯನ್ನ ಜೈಲಿಗೆ ಕಳುಹಿಸಲಾಗಿದ್ದು ಕೊರೊನಾ ಬಗ್ಗೆ ಪ್ರಬಂಧ ಬರೆಯುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಗ್ಯಾಲಿಯರ್​ನಲ್ಲಿ ಜನಜಾಗೃತಿಗಾಗಿ ಪೊಲೀಸರು ಯಾವುದೇ ಕ್ರಮ ಕೈಗೊಂಡರೂ ಸಹ ಜನತೆ ಎಚ್ಚೆತ್ತುಕೊಂಡಿರಲಿಲ್ಲ. ಅನೇಕರು ಮಾಸ್ಕ್​ಗಳನ್ನ ಧರಿಸುತ್ತಲೆ ಇರಲಿಲ್ಲ. ಹೀಗಾಗಿ ಅವರಿಗೆ ದಂಡ ವಿಧಿಸೋಕ್ಕಿಂತ ಕೊರೊನಾ ಬಗ್ಗೆ ಜಾಗೃತಿ ಮೂಡಿಸೋ ಸಲುವಾಗಿ ಈ ರೀತಿ ಪ್ರಬಂಧ ಬರೆಯುವ ಹೊಸ ಶಿಕ್ಷೆ ಕಂಡು ಹಿಡಿದಿದ್ದೇವೆ ಅಂತಾ ಜಿಲ್ಲಾ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಜೀವ್​ ಸಿಂಗ್​ ಮಾಹಿತಿ ನೀಡಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...