ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸುವ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿಗಳಿಗೆ ಹೊಸ ಶಿಕ್ಷೆಯನ್ನ ನೀಡುತ್ತಿದ್ದಾರೆ. ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರೋಕೋ – ಟೋಕೋ ಅಭಿಯಾನ ನಡೆಸಲಾಗುತ್ತಿದೆ. ಕೊರೊನಾ ನಿಯಮಗಳನ್ನ ಯಾರಾದರೂ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಅವರನ್ನ ಜೈಲಿನಲ್ಲಿ ಇರಿಸೋದು ಮಾತ್ರವಲ್ಲದೇ ಕೊರೊನಾ ಬಗ್ಗೆ ಪ್ರಬಂಧ ಬರೆಯಲು ನೀಡಲಾಗುತ್ತಿದೆ.
ಶನಿವಾರ ಕನಿಷ್ಟ 20 ಮಂದಿಯನ್ನ ಜೈಲಿಗೆ ಕಳುಹಿಸಲಾಗಿದ್ದು ಕೊರೊನಾ ಬಗ್ಗೆ ಪ್ರಬಂಧ ಬರೆಯುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಗ್ಯಾಲಿಯರ್ನಲ್ಲಿ ಜನಜಾಗೃತಿಗಾಗಿ ಪೊಲೀಸರು ಯಾವುದೇ ಕ್ರಮ ಕೈಗೊಂಡರೂ ಸಹ ಜನತೆ ಎಚ್ಚೆತ್ತುಕೊಂಡಿರಲಿಲ್ಲ. ಅನೇಕರು ಮಾಸ್ಕ್ಗಳನ್ನ ಧರಿಸುತ್ತಲೆ ಇರಲಿಲ್ಲ. ಹೀಗಾಗಿ ಅವರಿಗೆ ದಂಡ ವಿಧಿಸೋಕ್ಕಿಂತ ಕೊರೊನಾ ಬಗ್ಗೆ ಜಾಗೃತಿ ಮೂಡಿಸೋ ಸಲುವಾಗಿ ಈ ರೀತಿ ಪ್ರಬಂಧ ಬರೆಯುವ ಹೊಸ ಶಿಕ್ಷೆ ಕಂಡು ಹಿಡಿದಿದ್ದೇವೆ ಅಂತಾ ಜಿಲ್ಲಾ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಜೀವ್ ಸಿಂಗ್ ಮಾಹಿತಿ ನೀಡಿದ್ರು.