alex Certify ಮನೆಯಲ್ಲೇ ಕುಳಿತು ಉಚಿತವಾಗಿ ವೈದ್ಯರ ಜೊತೆ ಮಾತನಾಡಲು ನೆರವಾಗುತ್ತೆ ಈ ಅಪ್ಲಿಕೇಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕುಳಿತು ಉಚಿತವಾಗಿ ವೈದ್ಯರ ಜೊತೆ ಮಾತನಾಡಲು ನೆರವಾಗುತ್ತೆ ಈ ಅಪ್ಲಿಕೇಷನ್

ಇ-ಸಂಜೀವಿನಿ ಒಟಿಪಿ ಸೌಲಭ್ಯವನ್ನು ಜನರು ಮನೆಯಲ್ಲೇ ಪಡೆಯಬಹುದು. ಹೇಗೆ ಇದ್ರ ಲಾಭ ಪಡೆಯಬಹುದೆಂದು ಮೂವರು ವೈದ್ಯರ ಸಮಿತಿ ಮಾಹಿತಿ ನೀಡಿದೆ. ಕೊರೊನಾ ಸಂದರ್ಭದಲ್ಲಿ ಇ-ಸಂಚೀವಿನಿ ಸೇವೆ ರೋಗಿಗಳಿಗೆ ವರದಾನವಾಗಲಿದೆ. ಪ್ರತಿ ದಿನ ಸಾವಿರಾರು ಮಂದಿ ಇದ್ರ ಮೂಲಕ ಸಲಹೆ ಪಡೆಯಬಹುದಾಗಿದೆ.

ವಿಡಿಯೋ ಕರೆ ಮೂಲಕ ಜನರು ನಿಮ್ಮನ್ನು ನೇರವಾಗಿ ಸಂಪರ್ಕಿಸಲಿದ್ದಾರೆ. ನಿಮ್ಮ ರೋಗದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಪರೀಕ್ಷಾ ವರದಿ ನೋಡಲಿದ್ದಾರೆ. ನಂತ್ರ ನಿಮಗೆ ಬೇಕಾದ ಪ್ರಿಸ್ಕ್ರಿಪ್ಷನ್ ಬರೆಯಲಿದ್ದಾರೆ. ಇದು ಉಚಿತ ಸೇವೆ. ಇ-ಸಂಜೀವನಿ ಆ್ಯಪ್ ಅಥವಾ ಪೋರ್ಟಲ್ ಮೂಲಕ ನೀವು ತಜ್ಞ ವೈದ್ಯರನ್ನು ಸಂಪರ್ಕಿಸಬಹುದು.

ವೈದ್ಯರು ಇನ್ನೊಬ್ಬ ತಜ್ಞ ವೈದ್ಯರೊಂದಿಗೆ ಅನಾರೋಗ್ಯದ ಬಗ್ಗೆ ಸಮಾಲೋಚಿಸಲು ಬಯಸಿದರೆ, ಅದಕ್ಕೂ ಪ್ರತ್ಯೇಕ ಸೌಲಭ್ಯವಿದೆ. ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಪೋರ್ಟಲ್ ಅಥವಾ ಅಪ್ಲಿಕೇಶನ್‌ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಟೋಕನ್ ಸಂಖ್ಯೆಯನ್ನು ಪಡೆಯಬೇಕು. ಇದರ ನಂತರ ವೈದ್ಯರು ನಿಮ್ಮೊಂದಿಗೆ ವೀಡಿಯೊ ಕರೆಯ ಮೂಲಕ ಮಾತನಾಡುತ್ತಾರೆ. ಅನಾರೋಗ್ಯಕ್ಕೆ ಸಂಬಂಧಿಸಿದ ಇತರ ವಿವರವನ್ನು ನೀವು ಅಪ್ಲೋಡ್ ಮಾಡಬಹುದು.

ವೈದ್ಯರು ಶಿಫಾರಸು ಮಾಡಿದ ಔಷಧಿಗಳ ಪ್ರಿಸ್ಕ್ರಿಪ್ಷನನ್ನು ಮೊಬೈಲ್‌ನಲ್ಲಿ ಸೇವ್ ಮಾಡಬಹುದು. ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು. ಕೇರಳ, ಮಧ್ಯಪ್ರದೇಶದಲ್ಲಿ 24 ಗಂಟೆಗಳು, ಗುಜರಾತ್, ಉತ್ತರಾಖಂಡ, ಕೇರಳದಲ್ಲಿ 12 ಗಂಟೆ ಮತ್ತು ಇತರ ಸ್ಥಳಗಳಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 12 ರವರೆಗೆ ಕಾರ್ಯನಿರ್ವಹಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...