alex Certify ಕಾಳಿಂಗ ಸರ್ಪದೊಂದಿಗೆ ಕಬಡ್ಡಿಯಂತೆ ಆಡಿ ಗೆದ್ದ ಮಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಳಿಂಗ ಸರ್ಪದೊಂದಿಗೆ ಕಬಡ್ಡಿಯಂತೆ ಆಡಿ ಗೆದ್ದ ಮಂಗ

ಪ್ರಾಣಿಗಳ ನಡುವಿನ ಕಾದಾಟದ ವಿಡಿಯೋಗಳು ಅಂತರ್ಜಾಲ ತಾಣದಲ್ಲಿ ಸೆನ್ಸೇಶನ್ ಸೃಷ್ಟಿಸಿಬಿಡುತ್ತದೆ. ನೆಟ್ಟಿಗರು ಅದನ್ನು ಅಚ್ಚರಿಯಿಂದ ವೀಕ್ಷಿಸಿ ಕಮೆಂಟ್ ಮಾಡುತ್ತಾರೆ. ಇದೀಗ ಈ ಸರಣಿಗೆ ಹೊಸ ವಿಡಿಯೋ ಸೇರ್ಪಡೆಯಾಗಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಾಂತ ನಂದ ಅವರು ಮಂಗ ಹಾಗೂ ಹಾವಿನ ನಡುವಿನ ಘನಘೋರ ಕಾಳಗದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಒಂದು ನಿಮಿಷ ಐವತ್ತು ಸೆಕೆಂಡುಗಳ ವಿಡಿಯೋ ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಆರಂಭದಲ್ಲಿ ಮಂಗ ಹೆಡೆಯೆತ್ತಿ ನಿಂತ ಕಾಳಿಂಗ ಸರ್ಪದ ಮುಂದೆ ಕಬಡ್ಡಿ ಆಡುವ ರೀತಿ ತನ್ನ ಕಾಲನ್ನು ಮುಂದೆ ಮಾಡಿ ಕೆಣಕುತ್ತದೆ. ಹಾವು ಬುಸುಗುಡುತ್ತ ಮಂಗವನ್ನು ಹೆದರಿಸಿದರೂ ಮಂಗ ಮಾತ್ರ ತನ್ನ ಹಠ ಬಿಡುವುದೇ ಇಲ್ಲ. ಕೊನೆಗೆ ಕಾದಾಟ ಶುರುವಾಗಿ ರೋಷಾವೇಷದಲ್ಲಿ ಹೋರಾಟ ನಡೆಯುತ್ತದೆ.

ಹಾವಿನಷ್ಟೇ ರೋಷ ತುಂಬಿಕೊಂಡಿದ್ದ ಮಂಗ ನೆಗೆನೆಗೆದು ಹಾವನ್ನು ಅಟ್ಟಾಡಿಸುತ್ತದೆ. ಹಾವಿನ ತಲೆಗೆ ಬಡಿದು ಅದನ್ನು ಹಿಮ್ಮೆಟ್ಟಿಸುತ್ತದೆ. ಮಂಗವನ್ನು ಎದುರಿಸಲಾಗದ ಹಾವು ಕೊನೆಯಲ್ಲಿ ಸ್ಥಳದಿಂದ ಹೊರಟುಬಿಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...