alex Certify BIG BREAKING: ದೆಹಲಿಯಲ್ಲಿ ಮತ್ತೊಂದು ಭೂಕಂಪ, 2 ತಿಂಗಳಲ್ಲಿ 17 ನೇ ಸಲ ಕಂಪಿಸಿದ ಭೂಮಿ, ಹೆಚ್ಚಾಯ್ತು ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ದೆಹಲಿಯಲ್ಲಿ ಮತ್ತೊಂದು ಭೂಕಂಪ, 2 ತಿಂಗಳಲ್ಲಿ 17 ನೇ ಸಲ ಕಂಪಿಸಿದ ಭೂಮಿ, ಹೆಚ್ಚಾಯ್ತು ಆತಂಕ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ – ಎನ್ಸಿಆರ್ ಪ್ರದೇಶದಲ್ಲಿ ಇಂದು ಸಂಜೆ 7 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದೆ.

ಎನ್ಸಿಆರ್ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ಸಂಭವಿಸಿದ 9ನೇ ಲಘು ಭೂಕಂಪ ಇದಾಗಿದೆ. 2 ತಿಂಗಳ ಅವಧಿಯಲ್ಲಿ 17 ನೇ ಸಲ ಭೂಮಿ ಕಂಪಿಸಿದೆ. ಹರಿಯಾಣದಿಂದ ನೈರುತ್ಯ ಭಾಗಕ್ಕೆ 60 ಕಿಲೋ ಮೀಟರ್ ದೂರದ ಗುರುಗ್ರಾಮದಲ್ಲಿ ಭೂಕಂಪನದ ಕೇಂದ್ರಬಿಂದು ಕಂಡುಬಂದಿದೆ. ರಿಕ್ಟರ್ ಮಾಪಕದಲ್ಲಿ 4.5 ರಷ್ಟು ತೀವ್ರತೆಯ ಕಂಪನವಾಗಿದೆ.

ಜೂನ್ 8 ರಂದು ಕೊನೆಯ ಭೂಕಂಪಕ್ಕೆ ದೆಹಲಿ ಸಾಕ್ಷಿಯಾಗಿದ್ದು ರಿಕ್ಟರ್ ಮಾಪಕದಲ್ಲಿ 2.1 ರಷ್ಟು ತೀವ್ರತೆ ಕಂಡುಬಂದಿತ್ತು. ನಿರಂತರವಾಗಿ ಲಘು ಭೂಕಂಪನಗಳು ಆಗುತ್ತಿರುವುದರಿಂದ ದೊಡ್ಡ ಭೂಕಂಪ ಸಂಭವಿಸುವ ಆತಂಕ ಎದುರಾಗಿದೆ. ಆದರೆ ಭೂಕಂಪ ಶಾಸ್ತ್ರಜ್ಞರು ಹೇಳುವ ಪ್ರಕಾರ ಚಲನೆಯಿಂದ ಆಗಾಗ ಲಘು ಕಂಪನಗಳು ಉಂಟಾಗುತ್ತದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...