alex Certify ಮದ್ಯದ ಮತ್ತಿನಲ್ಲಿ ಪೊಲೀಸರ ವಾಹನ ಚಲಾಯಿಸಿದ ವೈದ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಮತ್ತಿನಲ್ಲಿ ಪೊಲೀಸರ ವಾಹನ ಚಲಾಯಿಸಿದ ವೈದ್ಯ….!

ಪಾನಮತ್ತನಾಗಿ ವಾಹನ ಚಲಾಯಿಸುತ್ತಿದ್ದ ವೈದ್ಯನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬಳಿಕ ತನ್ನ ವಾಹನವನ್ನ ಕೊಡಲಿಲ್ಲ ಎಂಬ ಕಾರಣಕ್ಕೆ ಪೊಲೀಸ್​ ಗಸ್ತು ವಾಹನವನ್ನೇ ಓಡಿಸಿ ಪೊಲೀಸ್ ಠಾಣೆ ಅತಿಥಿಯಾಗಿದ್ದಾನೆ.

ವೈದ್ಯನನ್ನ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಬಳಿಕ ಈತನನ್ನ ಈಗ ಚೆಂಗಲ್ಪಟ್ಟು ಜೈಲಿನಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಣಿಪೇಟೆ ಜಿಲ್ಲೆಯ ಅರಕೊಣಂ ಮೂಲದ ಎಸ್.​ ಮುತ್ತು ಗಣೇಶ್​ ಬಂಧಿತ ಆರೋಪಿ. ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚರ್ಮರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಭಾನುವಾರ ಮುಂಜಾನೆ 1.30ರ ಸುಮಾರಿಗೆ ಈತನನ್ನ ಹಿಡಿದ ಪೊಲೀಸರು ದಂಡ ವಿಧಿಸಿದ್ದಾರೆ. ಇದಾದ ಬಳಿಕ ವೈದ್ಯ ತನ್ನ ವಾಹನ ವಾಪಾಸ್​ ಮಾಡಿ ಎಂದು ವಾದ ಮಾಡಿದ್ದಾನೆ. ಆದರೆ ಪೊಲೀಸರು ಇದಕ್ಕೆ ನಿರಾಕರಿಸಿದ ಕಾರಣ ಮುತ್ತು ಗಣೇಶ್​ ಪೊಲೀಸರ ವಾಹನವನ್ನೇ ಚಲಾಯಿಸಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...