alex Certify ಮಗಳ ಮದುವೆಗೆ ಹಣ ಹೊಂದಿಸಲು ಮಾಲೀಕನ ಮಕ್ಕಳನ್ನೇ ಕಿಡ್ನಾಪ್‌ ಮಾಡಿದ ಚಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಮದುವೆಗೆ ಹಣ ಹೊಂದಿಸಲು ಮಾಲೀಕನ ಮಕ್ಕಳನ್ನೇ ಕಿಡ್ನಾಪ್‌ ಮಾಡಿದ ಚಾಲಕ..!

ಮುಂಬೈನ ಬಿಲ್ಡರ್​ ಒಬ್ಬರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಾಗೂ ಆತನ ಸಂಬಂಧಿ ಸೇರಿ ಮಾಲೀಕನ ಇಬ್ಬರು ಮಕ್ಕಳನ್ನೇ ಅಪಹರಿಸಿ ಇದೀಗ ಜೈಲು ಪಾಲಾಗಿದ್ದಾರೆ. ಮುಂಬೈ ಉಪನಗರವಾದ ಅಂಧೇರಿಯಲ್ಲಿ ಈ ಘಟನೆ ನಡೆದಿದೆ. ಬಿಲ್ಡರ್​ ಬಳಿ ಕೆಲಸ ಮಾಡುತ್ತಿದ್ದ ಚಾಲಕ ಮಕ್ಕಳನ್ನ ಅಪಹರಿಸಿ 1 ಕೋಟಿ ರೂಪಾಯಿ ಪಡೆಯುವ ಹುನ್ನಾರ ಮಾಡಿದ್ದ ಎನ್ನಲಾಗಿದೆ.

ಮಗಳ ಮದುವೆಗೆ ಹಣ ಹೊಂದಿಸಲಿಕ್ಕಾಗಿ ನಾನು ನನ್ನ ಮಾಲೀಕನ ಅವಳಿ ಮಕ್ಕಳನ್ನ ಅಪಹರಣ ಮಾಡಿದ್ದು ನಿಜ ಎಂದು ಆರೋಪಿ ಚಾಲಕ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಮೀನು ತುಂಬಿದ್ದ ಲಾರಿ ಅಪಘಾತ: ಪುಕ್ಕಟ್ಟೆ ಮೀನು ಆಯ್ದುಕೊಳ್ಳಲು ಮುಗಿಬಿದ್ದ ಜನ

ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ ಎಂದು ರಿಯಲ್​ ಎಸ್ಟೇಟ್​ ಉದ್ಯಮಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜುಹುವಿನಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಂದ ಅಪಹರಣಕಾರರು ಚಾಲಕನನ್ನ ಥಳಿಸಿ ಮಕ್ಕಳಿಗೆ ಬೆದರಿಕೆ ಹಾಕಿ ಬಲವಂತದಿಂದ ಕಾರು ಬಾಗಿಲನ್ನ ತೆರೆದು ಪಿವಿಆರ್​ ಪ್ರದೇಶದ ಬಳಿ ಕಾರನ್ನ ತೆಗೆದುಕೊಂಡು ಹೋಗಿದ್ದಾರೆ.

ಪಿವಿಆರ್​ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಚಾಲಕ ಹಾಗೂ ಮಕ್ಕಳಿಗೆ ನಿದ್ರೆ ಮಾತ್ರೆ ನೀಡಲಾಗಿತ್ತು. ಬಳಿಕ ಒಂದು ಮಗು ಹಾಗೂ ಚಾಲಕನನ್ನ ಶಾಲೆಯ ಬಸ್​ನಲ್ಲಿ ಕಿಡ್ನಾಪರ್​ ಕೂರಿಸಿದ್ದಾನೆ. ಇನ್ನೊಂದು ಮಗು ಕಾರಿನಲ್ಲೇ ಇತ್ತು. ಇದಾದ ಬಳಿಕ ಇನ್ನೂ ಆರು ಮಂದಿ ಅಪಹರಣಕಾರರು ಸ್ಥಳಕ್ಕೆ ಆಗಮಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಹನಿ ಟ್ರ್ಯಾಪ್ ಪ್ರಕರಣ – ಖಾಸಗಿ ಸುದ್ದಿ ವಾಹಿನಿ ಮಾಲೀಕ ಸೇರಿ ನಾಲ್ವರ ಬಂಧನ

ಆದರೆ ಹೇಗೋ ಒಂದು ಮಗು ಕಿಡ್ನಾಪರ್​ ಕೈಯಿಂದ ತಪ್ಪಿಸಿಕೊಂಡಿದೆ. ಇದಾದ ಬಳಿಕ ಬರೋಬ್ಬರಿ 18 ತಾಸುಗಳ ಕಾಲ ಚಾಲಕನ ವಿಚಾರಣೆ ನಡೆಸಿದ್ದಾರೆ. ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಿದ ಚಾಲಕ ಬಳಿಕ ಹಣಕ್ಕಾಗಿ ತಾನೇ ಈ ಡ್ರಾಮಾ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...