alex Certify ಪತ್ನಿಯ ವಿವಾಹೇತರ ಸಂಬಂಧದ ಶಂಕೆ, ಊರಿಗೆ ಬಂದ ಪತಿಯಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ವಿವಾಹೇತರ ಸಂಬಂಧದ ಶಂಕೆ, ಊರಿಗೆ ಬಂದ ಪತಿಯಿಂದಲೇ ಘೋರ ಕೃತ್ಯ

ಭೋಪಾಲ್: ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಅಕ್ರಮ ಸಂಬಂಧದ ಅನುಮಾನದ ಮೇಲೆ ವ್ಯಕ್ತಿಯೊಬ್ಬ ಪತ್ನಿ ಮತ್ತು ತೈಲ ವ್ಯಾಪಾರಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

ಭಿಂದ್ ಜಿಲ್ಲೆಯ ಮೌ ನಗರದಲ್ಲಿ ಘಟನೆ ನಡೆದಿದೆ. ಆನಂದ್ ಯಾದವ್(30) ಕೊಲೆ ಆರೋಪಿ. ಪತ್ನಿ ಸರೋಜ್(25) ತೈಲ ವ್ಯಾಪಾರಿ ಹರಿಯೋಮ್ ಅಗರವಾಲ್(45) ಕೊಲೆಯಾದವರು. ಗ್ವಾಲಿಯರ್ ನಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಯಾದವ್ ಲಾಕ್ಡೌನ್ ಜಾರಿಯಾದ ನಂತರದಲ್ಲಿ ಊರಿಗೆ ಮರಳಿದ್ದ.

ಪತ್ನಿ ಸರೋಜ್ ಹರಿಯೋಮ್ ಜೊತೆಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಅನುಮಾನಗೊಂಡಿದ್ದ ಆನಂದ್ ಯಾದವ್ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಬಳಿಕ ಸಹಚರನ ನೆರವಿನೊಂದಿಗೆ ಹರಿಯೋಮ್ ನನ್ನು ಹರಿತವಾದ ಆಯುಧದಿಂದ ಇರಿದು ಬಳಿಕ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಘಟನೆಯ ನಂತರ ಆನಂದ್ ಯಾದವ್ ಮತ್ತು ಆತನ ಸಹಚರ ಪರಾರಿಯಾಗಿದ್ದು ಅವರನ್ನು ಬಂಧಿಸಲು ಬಲೆ ಬೀಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸಿಂಗ್ ಕಾಂಚನ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...