alex Certify ವೈರಲ್‌ ಆದ ʼಶೂಟೌಟ್ʼ‌ ವಿಡಿಯೋ ಹಿಂದಿನ ಅಸಲಿ ಸತ್ಯ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್‌ ಆದ ʼಶೂಟೌಟ್ʼ‌ ವಿಡಿಯೋ ಹಿಂದಿನ ಅಸಲಿ ಸತ್ಯ ಬಹಿರಂಗ

ಪೊಲೀಸ್ ಅಧಿಕಾರಿಯೊಬ್ಬರು ಯುವಕನೊಬ್ಬನನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಶೂಟ್ ಮಾಡಿ, ಬಳಿಕ ಕೊಲೆಯಾದ ವ್ಯಕ್ತಿ ಬಳಿ ಅಳುತ್ತಾ ಕುಳಿತ ಯುವತಿಗೂ ಶೂಟ್‌ ಮಾಡುವ ವಿಡಿಯೋವೊಂದು ವೈರಲ್ ಆಗಿತ್ತು. ಜನ ಇದನ್ನು ನಿಜ ಘಟನೆಯೆಂದೇ ಭಾವಿಸಿದ್ದರು.

ಆದರೆ ಉತ್ತರ ಪ್ರದೇಶದ ಪೊಲೀಸ್ ಸಿಬ್ಬಂದಿಯೊಬ್ಬರು ಈ ವಿಡಿಯೋದ ವಾಸ್ತವಿಕತೆಯನ್ನು ಪರಿಶೀಲಿಸಿದ ಬಳಿಕ ಆ ದೃಶ್ಯ ವೆಬ್‌ ಸೀರೀಸ್‌ ಶೋ ಒಂದರದ್ದು ಎಂದು ಗೊತ್ತಾಗಿದೆ.

ಪೋಷಕರೇ ಎಚ್ಚರ: ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ ಕೊರೊನಾ ಎರಡನೇ ಅಲೆ

ಭಯೋತ್ಪಾದನೆ ನಿಗ್ರಹ ದಳದ ಹೆಚ್ಚುವರಿ ಎಸ್ಪಿ ರಾಹುಲ್ ಶ್ರೀವಾಸ್ತವ ಅವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇ‌ರ್‌ ಮಾಡಿದ್ದು, ಇದರಿಂದ ಬಹಳಷ್ಟು ಗೊಂದಲ ಹಾಗೂ ತನಿಖೆಗಳು ನಡೆದಿವೆ ಎಂದಿದ್ದಾರೆ.

ಹರಿಯಾಣಾದ ಕರ್ನಲ್‌ನ ಕೆಫೆಯೊಂದರ ಹೊರಗೆ ಶೂಟ್‌ ಮಾಡಲಾದ ವೆಬ್‌ ಸೀರೀಸ್ ಒಂದರ ದೃಶ್ಯ ಇದಾಗಿದ್ದು, ಈ ವಿಚಾರವನ್ನು ’ಫ್ರೆಂಡ್ಸ್‌ ಕೆಫೆ’ಯ ವ್ಯವಸ್ಥಾಪಕರು ಖಾತ್ರಿಪಡಿಸಿದ್ದಾರೆ ಎಂದಿದ್ದಾರೆ ಎಎಸ್ಪಿ ರಾಹುಲ್.

ಪೊಲೀಸ್ ಅಧಿಕಾರಿ ಹಾಗೂ ಯುವಕನೊಬ್ಬನ ನಡುವೆ ಆರಂಭಗೊಳ್ಳುವ ಮಾತಿನ ಚಕಮಕಿ ಹೀಗೆ ಕೊಲೆಯಲ್ಲಿ ಅಂತ್ಯವಾಗುವ ಈ ಸೀನ್‌ ಅನ್ನು ಬಹಳಷ್ಟು ಜನರು ನಿಜವೆಂದೇ ಭಾವಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...