alex Certify ರಕ್ತದಾನ ಮಾಡಿದ್ರೆ ಇಲ್ಲಿ ಸಿಗುತ್ತೆ ಫ್ರೀ ಚಿಕನ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತದಾನ ಮಾಡಿದ್ರೆ ಇಲ್ಲಿ ಸಿಗುತ್ತೆ ಫ್ರೀ ಚಿಕನ್​..!

ನೀವು ನಮಗೆ ರಕ್ತದಾನ ಮಾಡಿದ್ರೆ ನಾವು ನಿಮಗೆ 1 ಕೆಜಿ ಚಿಕನ್​ ಇಲ್ಲವೇ ಪನ್ನೀರ್​ ನೀಡುತ್ತೇವೆ ಎಂಬ ಪೋಸ್ಟರ್​ಗಳು ಕಳೆದ ಕೆಲ ದಿನಗಳಿಂದ ಮುಂಬೈನಾದ್ಯಂತ ಕಾಣುತ್ತಿವೆ.

ಕಾರ್ಪೋರೇಟರ್​ ಹಾಗೂ ಆಡಳಿತಾರೂಢ ಶಿವಸೇನೆಯ ಸದಸ್ಯ ಸಮಧನ್​ ಸದಾ ಸರ್ವಾಂಕರ್​​ ಎಂಬವರು ಆಯೋಜಿಸುತ್ತಿರುವ ರಕ್ತದಾನ ಶಿಬಿರದ ಪೋಸ್ಟರ್​ ಇದಾಗಿದೆ.

ನಗರದಾದ್ಯಂತ ಇರುವ ಬ್ಲಡ್​ ಬ್ಯಾಂಕ್​ಗಳಲ್ಲಿ ರಕ್ತದ ಕೊರತೆ ಕಂಡು ಬರುತ್ತಿರುವ ಹಿನ್ನೆಲೆ ಸಮಧನ್​ ಈ ಪ್ಲಾನ್​ ಮಾಡಿದ್ದಾರಂತೆ.

ಕೊರೊನಾ ವೈರಸ್​ಗೂ ಮೊದಲು ನೂರಕ್ಕೂ ಹೆಚ್ಚು ಜನ ಪ್ರತಿನಿತ್ಯ ರಕ್ತದಾನ ಮಾಡುತ್ತಿದ್ದರು. ಆದರೆ ಈಗ ಈ ಸಂಖ್ಯೆ ಡಜನ್​ಗೂ ಕಡಿಮೆಯಾಗಿದೆ. ಹೀಗಾಗಿ ಜನರಿಗೆ ರಕ್ತದಾನ ಮಾಡುವಂತೆ ಪ್ರೇರೇಪಿಸುವ ಸಲುವಾಗಿ ಚಿಕನ್​ ಇಲ್ಲವೇ ಪನ್ನೀರ್​ನ್ನ ಉಚಿತವಾಗಿ ನೀಡೋದಾಗಿ ಆಮಿಷ ಒಡ್ಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...