alex Certify ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಉತ್ತಮ ಉದಾಹರಣೆ ಈ ಶ್ವಾನದ ಕತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಉತ್ತಮ ಉದಾಹರಣೆ ಈ ಶ್ವಾನದ ಕತೆ

ಮೋಸ, ದರೋಡೆಗಳೇ ಹೆಚ್ಚಾಗಿರುವ ಈ ಪ್ರಪಂಚದಲ್ಲಿ ಮಾನವೀಯತೆ ಅನ್ನೋದು ಇನ್ನೂ ನೆಲೆಸಿದೆ ಅನ್ನೋದಕ್ಕೆ ಈ ನಾಯಿ ಹಾಗೂ ಕಾನ್​ಸ್ಟೇಬಲ್​ ಕತೆಯೇ ಉತ್ತಮ ಉದಾಹರಣೆಯಾಗಿದೆ.

ಪೀಪಲ್​ ಫಾರ್​ ಎನಿಮಲ್ಸ್ ಎಂಬ ಟ್ರಸ್ಟ್ ನಡೆಸುತ್ತಿರುವ ಕಾನ್ಸ್​ಟೇಬಲ್​ ಚಂದ್ರಪಾಲ್​ ತನ್ವಾರ್​ ಎಂಬವರು ಬಹಳ ಸಮಯದ ಹಿಂದೆ ರೈಲು ಹಳಿಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ನಾಯಿಯೊಂದನ್ನ ಕಂಡಿದ್ದರು.

ಬಹುತೇಕ ಸಾವಿನ ಸಮೀಪಕ್ಕೆ ಹೋಗಿದ್ದ ಆ ನಾಯಿಗೆ ಶಸ್ತ್ರ ಚಿಕಿತ್ಸೆ ಮಾಡಿ ಪ್ರಾಣಾಪಾಯದಿಂದ ಕಾಪಾಡಲಾಗಿತ್ತು. ಈ ಚಿಕಿತ್ಸೆ ನಡೆದ ಬಳಿಕ ರಾಕಿ ನಡೆಯಲು ಕಲಿಯದೇ ಇದ್ದರೂ ಸಹ ಹಾರಲು ಸಿದ್ಧವಾಗಿದೆ.

ಯೆಸ್​…! ಈ ವಾರ ಈ ನಾಯಿ ಯುಕೆಗೆ ಪ್ರಯಾಣ ಬೆಳೆಸಲಿದೆ. ವಿದೇಶಿ ಕುಟುಂಬವೊಂದು ಈ ನಾಯಿಯನ್ನ ದತ್ತು ಪಡೆಯಲು ಮುಂದಾಗಿದೆ. ಕಾಲುಗಳ ಹೆಚ್ಚಿನ ಚಿಕಿತ್ಸೆಗಾಗಿ ಈ ನಾಯಿ ವೈಲ್ಡ್ ಎಟ್​ ಹಾರ್ಟ್​ ಫೌಂಡೇಶನ್​ ಆರೈಕೆಯಲ್ಲಿ ಇರಲಿದೆ. ಈ ಸಂಬಂಧ ಮಾತನಾಡಿದ ಪಿಎಫ್​ಎ ಅಧ್ಯಕ್ಷ ರವಿ ದುಬೆ, ಕಳೆದ ವರ್ಷ ಅಕ್ಟೋಬರ್​ನಲ್ಲಿ ಈ ನಾಯಿ ಫರೀದಾಬಾದ್​ ರೈಲಿನಡಿಯಲ್ಲಿ ಸಿಕ್ಕು ಅಪಘಾತಕ್ಕೀಡಾಗಿತ್ತು. ಬಳಿಕ ಇದರ ಕಾಲನ್ನ ಕತ್ತರಿಸೋದು ಬಿಟ್ಟು ನಮಗೂ ಬೇರೆ ದಾರಿ ಇರಲಿಲ್ಲ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...