ಮೋಸ, ದರೋಡೆಗಳೇ ಹೆಚ್ಚಾಗಿರುವ ಈ ಪ್ರಪಂಚದಲ್ಲಿ ಮಾನವೀಯತೆ ಅನ್ನೋದು ಇನ್ನೂ ನೆಲೆಸಿದೆ ಅನ್ನೋದಕ್ಕೆ ಈ ನಾಯಿ ಹಾಗೂ ಕಾನ್ಸ್ಟೇಬಲ್ ಕತೆಯೇ ಉತ್ತಮ ಉದಾಹರಣೆಯಾಗಿದೆ.
ಪೀಪಲ್ ಫಾರ್ ಎನಿಮಲ್ಸ್ ಎಂಬ ಟ್ರಸ್ಟ್ ನಡೆಸುತ್ತಿರುವ ಕಾನ್ಸ್ಟೇಬಲ್ ಚಂದ್ರಪಾಲ್ ತನ್ವಾರ್ ಎಂಬವರು ಬಹಳ ಸಮಯದ ಹಿಂದೆ ರೈಲು ಹಳಿಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ನಾಯಿಯೊಂದನ್ನ ಕಂಡಿದ್ದರು.
ಬಹುತೇಕ ಸಾವಿನ ಸಮೀಪಕ್ಕೆ ಹೋಗಿದ್ದ ಆ ನಾಯಿಗೆ ಶಸ್ತ್ರ ಚಿಕಿತ್ಸೆ ಮಾಡಿ ಪ್ರಾಣಾಪಾಯದಿಂದ ಕಾಪಾಡಲಾಗಿತ್ತು. ಈ ಚಿಕಿತ್ಸೆ ನಡೆದ ಬಳಿಕ ರಾಕಿ ನಡೆಯಲು ಕಲಿಯದೇ ಇದ್ದರೂ ಸಹ ಹಾರಲು ಸಿದ್ಧವಾಗಿದೆ.
ಯೆಸ್…! ಈ ವಾರ ಈ ನಾಯಿ ಯುಕೆಗೆ ಪ್ರಯಾಣ ಬೆಳೆಸಲಿದೆ. ವಿದೇಶಿ ಕುಟುಂಬವೊಂದು ಈ ನಾಯಿಯನ್ನ ದತ್ತು ಪಡೆಯಲು ಮುಂದಾಗಿದೆ. ಕಾಲುಗಳ ಹೆಚ್ಚಿನ ಚಿಕಿತ್ಸೆಗಾಗಿ ಈ ನಾಯಿ ವೈಲ್ಡ್ ಎಟ್ ಹಾರ್ಟ್ ಫೌಂಡೇಶನ್ ಆರೈಕೆಯಲ್ಲಿ ಇರಲಿದೆ. ಈ ಸಂಬಂಧ ಮಾತನಾಡಿದ ಪಿಎಫ್ಎ ಅಧ್ಯಕ್ಷ ರವಿ ದುಬೆ, ಕಳೆದ ವರ್ಷ ಅಕ್ಟೋಬರ್ನಲ್ಲಿ ಈ ನಾಯಿ ಫರೀದಾಬಾದ್ ರೈಲಿನಡಿಯಲ್ಲಿ ಸಿಕ್ಕು ಅಪಘಾತಕ್ಕೀಡಾಗಿತ್ತು. ಬಳಿಕ ಇದರ ಕಾಲನ್ನ ಕತ್ತರಿಸೋದು ಬಿಟ್ಟು ನಮಗೂ ಬೇರೆ ದಾರಿ ಇರಲಿಲ್ಲ ಎಂದು ಹೇಳಿದ್ರು.