alex Certify ಮಾರುಕಟ್ಟೆಗೆ ಬಂತು ಡಾಕ್ಟರ್ ಮ್ಯಾಂಗೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಗೆ ಬಂತು ಡಾಕ್ಟರ್ ಮ್ಯಾಂಗೋ…!

ಲಖನೌ: ಕರೊನಾ ಲಾಕ್‌ಡೌನ್ ಸಮಯದಲ್ಲಿ ಬೆಳೆದ ದುಶೇರಿ ಮಾವಿನ ಹಣ್ಣಿನ ಹೊಸ ತಳಿಯೊಂದಕ್ಕೆ “ಡಾಕ್ಟರ್ ಮ್ಯಾಂಗೊ” ಎಂದು ಹೆಸರಿಡಲಾಗಿದೆ.

ಮ್ಯಾಂಗೊ ಮ್ಯಾನ್ ಎಂದೇ ಪ್ರಸಿದ್ಧಿ ಪಡೆದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಿ ಖಲಿಮುಲ್ಲಾ ಹೊಸ ತಳಿಗೆ ವೈದ್ಯರ ಹೆಸರಿಟ್ಟಿದ್ದಾರೆ. ಲಖನೌ ಹೊರ ವಲಯದ ಮಹಿಲಾಬಾದ್ ಎಂಬಲ್ಲಿನ ತೋಟದಲ್ಲಿ ಹೊಸ ಮಾವಿನ ತಳಿಗಳನ್ನು ಬೆಳೆದು ಹಾಜಿ ಹೆಸರಾಗಿದ್ದಾರೆ. ಕಳೆದ ವರ್ಷ ಅವರು ತಳಿಯೊಂದಕ್ಕೆ‌ ಅಮಿತ್ ಷಾ ಎಂದು ಹೆಸರಿಟ್ಟಿದ್ದರು. 2015 ರಲ್ಲಿ ತಳಿಯೊಂದಕ್ಕೆ ನರೇಂದ್ರ ಮೋದಿ ಎಂಬ ಹೆಸರಿಟ್ಟಿದ್ದರು.

ಈಗ ವೈದ್ಯರು, ಹಾಗೂ ವೈದ್ಯಕೀಯ ಸಿಬ್ಬಂದಿ ಕರೋನಾ ನಿರ್ಮೂಲನೆಗೆ ಪಣ ತೊಟ್ಟಿದ್ದರಿಂದ ಅವರ ಗೌರವಾರ್ಥ ಈ ಹೆಸರಿಡಲಾಗಿದೆ ಎಂದು ಹಾಜಿ ಖಲಿಮುಲ್ಲಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...