alex Certify ಮದ್ಯ ಪ್ರಿಯರಿಗೆ ಟಿಪ್ಸ್ ಕೊಟ್ಟಿದ್ದಾರೆ ಈ ಅಂಕಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಪ್ರಿಯರಿಗೆ ಟಿಪ್ಸ್ ಕೊಟ್ಟಿದ್ದಾರೆ ಈ ಅಂಕಲ್

ಕೇಂದ್ರ ಸರ್ಕಾರ ಲಾಕ್ ಡೌನ್ ಇರುವವರೆಗೆ ಎಲ್ಲ ಮದ್ಯಪಾನ ಮಾರಾಟ ಮತ್ತು ಉತ್ಪಾದನೆಯನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಚಿಂತೆಗೀಡಾಗಿದ್ದಾರೆ.

ಇದರ ನಡುವೆ ಮದ್ಯಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿಂತೆಯನ್ನು ವಿಭಿನ್ನವಾಗಿ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಈಗ ಸ್ವಲ್ಪ ಸ್ವಲ್ಪ ಕುಡೀರಿ (ತೋಡಿ ತೋಡಿ ಪೀಯಾ ಕರೋ) ಎನ್ನುವ ಪಂಕಜ್ ಉದಾಸ್ ಅವರ ಹಾಡಿಗೆ ಮಾಡಿರುವ ಟಿಕ್ ಟಾಕ್ ವಿಡಿಯೋ ಸಾಕಷ್ಟು ಸುದ್ದಿ ಮಾಡುತ್ತಿದೆ.

ಈ ವಿಡಿಯೋ ಮಾಡಿರುವಾತ ಮೈಕ್ರೋವೇವ್ ಅನ್ನೆ ಪಿಯಾನೋ ಮಾಡಿಕೊಂಡು, ಕೈಯಲ್ಲಿ ಮದ್ಯವಿರುವ ಗ್ಲಾಸ್ ಹಿಡಿದುಕೊಂಡು ಹಾಡಿಗೆ ತಕ್ಕನಾಗಿ ಅಭಿನಯಿಸಿದ್ದಾರೆ. ವಿಡಿಯೋ ಅಪ್ಲೋಡ್ ಆದ ಸ್ವಲ್ಪ ಸಮಯದಲ್ಲಿ ಟ್ವೀಟರ್ ಒಂದರಲ್ಲೇ 33,000 ವೀಕ್ಷಣೆಯನ್ನು ಪಡೆದಿದೆ.

ಸ್ವಲ್ಪ ಸ್ವಲ್ಪ ಕುಡಿಯಿರಿ, ಏಕೆಂದರೆ ಮದ್ಯವು ದುಬಾರಿಯಾಗಿದೆ, ಕುಡಿದಿರುವ ಲೆಕ್ಕ ಇಟ್ಟುಕೊಳ್ಳಿ ಎಂಬುದು ಹಾಡಿದ ಅರ್ಥವಾಗಿದೆ.

“ಇವತ್ತು ಗೊತ್ತಾಯಿತು ಪಂಕಜ್ ಏಕೆ ಬೇಜಾರಲ್ಲಿ(ಉದಾಸ್) ಇದ್ದರು” ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ಅಂಕಲ್ ಅರ್ಧ ಬಾಟಲ್ ಕುಡಿದ ಮೇಲೆ ಸ್ವಲ್ಪ ಸ್ವಲ್ಪ ಕುಡಿಯಿರಿ ಎಂದು ಹೇಳುತ್ತಿದ್ದಾರೆ” ಎಂದು ಹಾಸ್ಯಭರಿತವಾಗಿ ಕಾಮೆಂಟ್ ಮಾಡಿದ್ದಾರೆ.

— 9 e 3 k ? (@9e3k) April 17, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...