alex Certify ಸಂಪ್ರದಾಯ ಧಿಕ್ಕರಿಸಿ ಸೂಟ್‌ಧಾರಿಯಾಗಿ ಹಸೆಮಣೆಯೇರಿದ ವಧು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಪ್ರದಾಯ ಧಿಕ್ಕರಿಸಿ ಸೂಟ್‌ಧಾರಿಯಾಗಿ ಹಸೆಮಣೆಯೇರಿದ ವಧು…!

ದೇಸೀ ಸಂಸ್ಕೃತಿಗಳನ್ನು ಪ್ರಶ್ನಿಸಿ, ಅವುಗಳಿಗೆ ವ್ಯತಿರಿಕ್ತವಾದ ನಡೆಗಳನ್ನು ಇಡುವ ಮೂಲಕ ಹೊಸದೊಂದು ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಫೀಲ್‌ನಲ್ಲಿರುವುದು ಕೆಲವೊಬ್ಬರಿಗೆ ಭಾರೀ ಟ್ರೆಂಡ್ ಆಗಿಬಿಟ್ಟಿದೆ.

ತಮ್ಮ ಮದುವೆ ವೇಳೆ ಸಾಂಪ್ರದಾಯಿಕ ಲೆಹೆಂಗಾ ಧಿರಿಸನ್ನು ಧಿಕ್ಕರಿಸಿದ ಭಾರತೀಯ-ಅಮೆರಿಕನ್ ಮಹಿಳಾ ಉದ್ಯಮಿ ಸಂಜನಾ ರಿಶಿ, ಈ ಸಂದರ್ಭದಲ್ಲಿ ವಿಂಟೇಜ್ ಪ್ಯಾಂಟ್ ಸೂಟ್ ಒಂದನ್ನು ಧರಿಸಿದ್ದಾರೆ. ದೆಹಲಿ ಮೂಲದ ಉದ್ಯಮಿ ಧ್ರುವ್ ಮಹಾಜನ್‌, ಅವರನ್ನು ಸಂಜನಾ ವರಿಸಿದ್ದಾರೆ.

ಕಳೆದ ವರ್ಷ ದೆಹಲಿಗೆ ಮರಳಿದ್ದ ರಿಶಿ, ಸೆಪ್ಟೆಂಬರ್‌ನಲ್ಲಿ ಅಮೆರಿಕದಲ್ಲಿ ಮದುವೆಯಾಗಿ, ಬಳಿಕ ಭಾರತದಲ್ಲಿ ಒಮ್ಮೆ ಸಾಂಪ್ರದಾಯಿಕವಾಗಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕೋವಿಡ್-19 ಸಾಂಕ್ರಮಿಕ ಇವರ ಪ್ಲಾನ್‌ಗಳಿಗೆ ಅಡ್ಡಿಯಾಗಿದೆ. ಇಟಾಲಿಯನ್ ಡಿಸೈನರ್‌ ಗಿಯಾನ್ ‌ಫ್ರಾಂಕೋ ಫೇರ‍್ರೆ ವಿನ್ಯಾಸಗೊಳಿಸಿದ, 1990ರ ದಶಕದ ವಿಂಟೇಜ್ ಸೂಟ್‌ನಲ್ಲಿ ರಿಶಿ ಮಿಂಚುತ್ತಿರುವ ಚಿತ್ರಗಳು ವೈರಲ್ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...