alex Certify ನೋಟ್ ಬ್ಯಾನ್ ಗೆ 4 ವರ್ಷ: ಪ್ರಧಾನಿ ಮೋದಿ ಹರ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಟ್ ಬ್ಯಾನ್ ಗೆ 4 ವರ್ಷ: ಪ್ರಧಾನಿ ಮೋದಿ ಹರ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ

ನವದೆಹಲಿ: ಡಿಮಾನಿಟೈಸೇಷನ್ ನಿಂದಾಗಿ ಕಪ್ಪು ಹಣಕ್ಕೆ ಕಡಿವಾಣ ಹಾಕಲಾಗಿದೆ. ತೆರಿಗೆ ಪಾವತಿ ಹೆಚ್ಚಳಕ್ಕೆ ಇದು ನೆರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಡಿಮಾನಿಟೈಸೇಷನ್ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಪ್ಪು ಹಣವನ್ನು ಕಡಿಮೆ ಮಾಡಲು ತೆರಿಗೆ ವ್ಯವಸ್ಥೆಯಲ್ಲಿ ಸುಧಾರಿಸಲು ಡಿಮಾನಿಟೈಸೇಷನ್ ನೆರವಾಗಿದೆ. ಅಲ್ಲದೆ, ಪಾರದರ್ಶಕತೆಗೆ ಉತ್ತೇಜನ ನೀಡಿದೆ ಎಂದು ಹೇಳಿದ್ದಾರೆ.

201 6ರ ನವೆಂಬರ್ 8 ರಂದು ಕಪ್ಪು ಹಣಕ್ಕೆ ಕಡಿವಾಣ ಹಾಕಲು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಲಾಗಿತ್ತು. ಇದಾದ ನಂತರ ಹಲವಾರು ಮಂದಿ ಬಹಿರಂಗಪಡಿಸದ ಆದಾಯವನ್ನು ಪತ್ತೆಹಚ್ಚಲು ಕಾರಣವಾಗಿತ್ತು. ಆಪರೇಷನ್ ಕ್ಲೀನ್ ಮನಿ ಆರ್ಥಿಕತೆಯನ್ನು ಸರಿದಾರಿಗೆ ತರಲು ಸಹಾಯ ಮಾಡಿತು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೂ, ಈ ಬಗ್ಗೆ ಟ್ವೀಟ್ ಮಾಡಿದ್ದು, ಡಿಮಾನಿಟೈಸೇಷನ್ ಪಾರದರ್ಶಕತೆಯನ್ನು ತಂದಿದೆ. ತೆರಿಗೆ ವ್ಯವಸ್ಥೆಯನ್ನು ವಿಸ್ತರಿಸಿದೆ. ನಕಲಿ ಕರೆನ್ಸಿಯನ್ನು ನಿಗ್ರಹಿಸಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಡಿಮಾನಿಟೈಸೇಷನ್ ನಾಲ್ಕನೇ ವರ್ಷಾಚರಣೆಯ ಬಗ್ಗೆ ಪ್ರಸ್ತಾಪಿಸಿದ್ದು, ಕೋಟ್ಯಧೀಶ ಗೆಳೆಯರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದ ನೋಟ್ ಬ್ಯಾನ್ ಭಾರತದ ಆರ್ಥಿಕತೆಯನ್ನು ನಾಶಪಡಿಸಿದೆ ಎಂದು ದೂರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...