alex Certify ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಕ್ರಮೇಣ ಕುಸಿತಕ್ಕೆ ಕಾರಣವಾಗಿದೆ ಈ ಅಂಶ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಕ್ರಮೇಣ ಕುಸಿತಕ್ಕೆ ಕಾರಣವಾಗಿದೆ ಈ ಅಂಶ….!

ಅತಿಯಾದ ಶೀತ ವಾತಾವರಣದಿಂದಾಗಿ ದೆಹಲಿಯಲ್ಲಿ ತಾಪಮಾನ 6.8 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ. ಪಶ್ಚಿಮ ಹಿಮಾಲಯದ ಭಾಗದಿಂದ ಒಳ ಗಾಳಿ ಬೀಸುತ್ತಿದೆ ಎಂದು ದೆಹಲಿಯ ಹವಾಮಾನ ಇಲಾಖೆ ಹೇಳಿದೆ.

ಪಾಶ್ಚಿಮಾತ್ಯದಲ್ಲಿ ಹವಾಮಾನ ಏರುಪೇರಿನಿಂದಾಗಿ ನಗರದಲ್ಲಿ ಗುರುವಾರ 2.1 ಮಿ.ಮೀ ಮಳೆಯಾಗಿದೆ. ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ವ್ಯಾಪಕ ಹಿಮಪಾತಕ್ಕೆ ಕಾರಣವಾಗಿದೆ.

ಪರ್ವತಗಳಿಂದ ಶುಷ್ಕ ಗಾಳಿ ಬಯಲು ಪ್ರದೇಶದ ಕಡೆಗೆ ವ್ಯಾಪಕವಾಗಿ ಬೀಸುತ್ತಿದೆ. ಇದರಿಂದಾಗಿ ತಾಪಮಾನ ಕ್ರಮೇಣವಾಗಿ ಕುಸಿಯುತ್ತಿದೆ ಎಂದು ದೆಹಲಿ ಹವಾಮಾನ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ರು.

ಖುಷಿ ಸುದ್ದಿ….! ವಾಹನ ಸ್ಕ್ರ್ಯಾಪ್ ಮಾಡಿದ್ರೆ ಸಿಗುತ್ತೆ ಡಬಲ್ ಸಬ್ಸಿಡಿ

ದೆಹಲಿ ನಗರಕ್ಕೆ ಪ್ರಾತಿನಿಧಿಕ ದತ್ತಾಂಶ ಒದಗಿಸುವ ಸಫ್ದರ್​ಜಂಗ್​ ವೀಕ್ಷಣಾಲಯವು ಕನಿಷ್ಟ 6.8 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...