alex Certify ಕುಟುಂಬಸ್ಥರಿಗೇ ಬೇಡವಾಯ್ತು ಕೊರೊನಾ ಸೋಂಕಿತನ ಶವ..! ಜೀವದ ಹಂಗು ತೊರೆದು ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸ್​ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬಸ್ಥರಿಗೇ ಬೇಡವಾಯ್ತು ಕೊರೊನಾ ಸೋಂಕಿತನ ಶವ..! ಜೀವದ ಹಂಗು ತೊರೆದು ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸ್​ ಅಧಿಕಾರಿ

ದೇಶದಲ್ಲಿ ಕೊರೊನಾ ಎರಡನೇ ಅಲೆ ತಾಂಡವವಾಡುತ್ತಿದ್ದು ಮಾರಕ ವೈರಸ್​ಗೆ ಅನೇಕ ಮಂದಿ ಜೀವ ತೆತ್ತಿದ್ದಾರೆ. ದೆಹಲಿಯ ಗೋಕುಲ್​ಪುರಿ ಏರಿಯಾದಲ್ಲಿ ಕೊರೊನಾದಿಂದ ಮೃತರಾದ 35 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆ ಮಾಡುವಲ್ಲಿ ನೆರವಾದ ಎಎಸ್​ಐ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗ್ತಿದೆ.

ಎಲೆಕ್ಟ್ರಿಷಿಯನ್​ ಆಗಿದ್ದ ಸೋನುಕುಮಾರ್​ ಎಂಬವರು ಕೊರೊನಾ ಸೋಂಕಿನಿಂದ ಮೃತರಾಗಿದ್ದರು. ಸೋಂಕು ತಗುಲುತ್ತದೆ ಎಂಬ ಭಯಕ್ಕೆ ಮೃತ ವ್ಯಕ್ತಿಯ ತಾಯಿ ಹಾಗೂ ಪತ್ನಿ ಸಹ ಶವವನ್ನ ಸ್ವೀಕರಿಸಲು ಹಿಂಜರಿದಿದ್ರು. ಗೋಕುಲಪುರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ದ ಸುಶೀಲ್​ ಕುಮಾರ್,​​ ಮನೆಯಲ್ಲಿದ್ದ ಸೋನು ಮೃತ ದೇಹದ ಬಳಿ ಧಾವಿಸಿದ್ದಾರೆ.

ಕೂಡಲೇ ಖಾಸಗಿ ಆಂಬುಲೆನ್ಸ್ ಮೂಲಕ ಜಿಟಿಬಿ ಆಸ್ಪತ್ರೆಗೆ ಶವದ ಸಮೇತ ಸುಶೀಲ್​ ಆಗಮಿಸಿದ್ದಾರೆ. ಅಲ್ಲಿಂದ ಮೃತದೇಹವನ್ನ ಡಾ. ಹೆಡ್ಗೆವಾರ್​ ಆರೋಗ್ಯ ಆಸ್ಪತ್ರೆಗೆ ಸಾಗಿಸಲಾಗಿದೆ. ಇದಾದ ಬಳಿಕ ಅಶೋಕ್​ ನಗರದಲ್ಲಿರುವ ಸ್ಮಶಾನಕ್ಕೆ ಶವವನ್ನ ಕೊಂಡೊಯ್ದ ಎಎಸ್​ಐ ಸುಶೀಲ್​ ಕೊರೊನಾ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಎಎಸ್​ಐ ಸುಶೀಲ್​ ಕುಮಾರ್​, ಸೋನು ವಿಪರೀತ ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು, ಇದಕ್ಕಾಗಿ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಏಪ್ರಿಲ್​ 19ರಂದು ಅವರ ಸ್ಥಿತಿ ಇನ್ನಷ್ಟು ಕ್ಷೀಣಿಸಿದ್ದು ಅವರ ದೆಹಲಿಯ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಹಾಸಿಗೆ ಹಾಕಿ ಆಕ್ಸಿಜನ್​ ಕೊರತೆ ಹಿನ್ನೆಲೆ ಸೋನುರನ್ನ ಆಸ್ಪತ್ರೆಯಿಂದ ವಾಪಸ್​ ಕಳಿಸಲಾಗಿತ್ತು. ಮನೆಗೆ ವಾಪಸ್ಸಾದ ಸೋನು ಕೊನೆಯುಸಿರೆಳೆದಿದ್ದರು.

ಕೊರೊನಾ ಸೋಂಕು ಹರಡುತ್ತೆ ಎಂದು ನೆರೆಹೊರೆಯವರು ಬೆದರಿಸಿದ ಹಿನ್ನೆಲೆ ಸೋನು ಕುಟುಂಬಸ್ಥರು ಶವವನ್ನ ಮುಟ್ಟಲು ನಿರಾಕರಿಸಿದ್ದಾರೆ. ಮೃತ ಸೋನು 12 ವರ್ಷದ ಮಗನನ್ನ ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...