alex Certify ಗಂಡನ ಬಿಟ್ಟು ಸಂಗಾತಿ ಜೊತೆ ಜೀವನ: ಮತ್ತೊಬ್ಬನೊಂದಿಗೆ ಮಾತು, ಪಾಸ್ವರ್ಡ್ ಕೊಡದ ಗೆಳತಿಯನ್ನೇ ಕೊಂದ ಪ್ರಿಯಕರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡನ ಬಿಟ್ಟು ಸಂಗಾತಿ ಜೊತೆ ಜೀವನ: ಮತ್ತೊಬ್ಬನೊಂದಿಗೆ ಮಾತು, ಪಾಸ್ವರ್ಡ್ ಕೊಡದ ಗೆಳತಿಯನ್ನೇ ಕೊಂದ ಪ್ರಿಯಕರ

ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ 39 ವರ್ಷದ ವ್ಯಕ್ತಿಯೊಬ್ಬ 35 ವರ್ಷದ ಮಹಿಳೆಯನ್ನು ಕೊಲೆ ಮಾಡಿದ್ದಾನೆ.

ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದ ಸಂಗಾತಿ ಪಾಸ್ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ್ದರಿಂದ ಆಕೆಯನ್ನು ಕೊಲೆ ಮಾಡಿದ್ದಾನೆ. ದೆಹಲಿಯ ವಿನೋದ್ ನಗರದಲ್ಲಿ ಕಳೆದ ಮಂಗಳವಾರ ಘಟನೆ ನಡೆದಿದ್ದು ಶನಿವಾರ ಆರೋಪಿಯನ್ನು ಬಂಧಿಸಲಾಗಿದೆ.

ಮಮತಾ ಶರ್ಮಾ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಖಾಸಗಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಮತಾ ಶರ್ಮಾ ಅವರನ್ನು ಲಿವಿ ಇನ್ ಸಂಗಾತಿ ಬ್ರಹ್ಮಪಾಲ್ ಸಿಂಗ್ ಕೊಲೆ ಮಾಡಿದ್ದಾನೆ.

ಮೂರು ವರ್ಷದ ಹಿಂದೆ ಗಂಡನನ್ನು ತೊರೆದಿರುವ ಮಮತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಎರಡು ವರ್ಷಗಳ ಹಿಂದೆ ಮೂರು ಮಕ್ಕಳೊಂದಿಗೆ ವಿವಾಹಿತ ಬ್ರಹ್ಮಪಾಲ್ ಜೊತೆಗೆ ಸೇರಿ ಜೀವನ ನಡೆಸುತ್ತಿದ್ದರು. ಸಿಂಗ್ ಕುಟುಂಬದವರು ಜಗಳ ಮಾಡುತ್ತಿದ್ದ ಕಾರಣ ಆತನೊಂದಿಗೆ ಸಂಬಂಧ ಕಡಿದುಕೊಳ್ಳಲು ಮಮತಾ ಶರ್ಮಾ ಮುಂದಾಗಿದ್ದಳು.

ಈ ನಡುವೆ ಬ್ರಹ್ಮಪಾಲ್ ಗೆ ಮಮತಾ ನಡೆ ಮೇಲೆ ಅನುಮಾನ ಉಂಟಾಗಿದೆ. ಯಾರೊಂದಿಗೋ ಫೋನ್ ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ್ದು, ಮೊಬೈಲ್ ಪಾಸ್ವರ್ಡ್ ಕೊಡುವಂತೆ ಕೇಳಿದ್ದಾನೆ. ಆಕೆ ಪಾಸ್ವರ್ಡ್ ನೀಡಲು ನಿರಾಕರಿಸಿದಾಗ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಉಪಪೊಲೀಸ್ ಆಯುಕ್ತ ರಾಕೇಶ್ ಪವೇರಿಯಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...