alex Certify ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆ ನೋಡಿದ ಕಳ್ಳ ಮಾಡಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆ ನೋಡಿದ ಕಳ್ಳ ಮಾಡಿದ್ದೇನು…?

ದೆಹಲಿಯ ಜಂಗ್‌ಪುರದಲ್ಲಿ ವಕೀಲೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನ ಮಾಡಲು ಮನೆಗೆ ಬಂದ ವ್ಯಕ್ತಿ, ಮನೆಯಲ್ಲಿ ಒಬ್ಬಳೇ ಇದ್ದ ಕಾರಣ ಬೆದರಿಸಿ ಅತ್ಯಾಚಾರವೆಸಗಿದ್ದಾನೆ.

ಅತ್ಯಾಚಾರದ ನಂತರ ಆರೋಪಿ ಕತ್ತು ಹಿಸುಕಿ ಓಡಿಹೋಗಿದ್ದ. ಮಹಿಳೆ ಮೃತಪಟ್ಟಿದ್ದಾಳೆಂದೆ ಆರೋಪಿ ಭಾವಿಸಿದ್ದ. ಈ ಘಟನೆ ಶುಕ್ರವಾರ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಸಿಸಿ ಟಿವಿಯಲ್ಲಿ ಆರೋಪಿ ಕಾಣಿಸಿಕೊಂಡಿದ್ದು, ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕದಿಯುವ ಉದ್ದೇಶದಿಂದ  ಮನೆಗೆ ಬಂದಿದ್ದೆ ಎಂದು  ಆರೋಪಿ ಸೋನು ವಿಚಾರಣೆಯಲ್ಲಿ ತಿಳಿಸಿದ್ದಾನೆ. ಮನೆಯಲ್ಲಿ ಮಹಿಳೆಯೊಬ್ಬಳನ್ನೇ ನೋಡಿದ ಸೋನು ಅತ್ಯಾಚಾರವೆಸಗಿದ್ದಾನೆ. ನಂತ್ರ ಕತ್ತು ಹಿಸುಕಿದ್ದಾನೆ. ಪ್ರಜ್ಞೆ ತಪ್ಪಿದ್ದ ಪೀಡಿತೆ ಎಚ್ಚರವಾದ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...