alex Certify ಮಂತ್ರಮುಗ್ದಗೊಳಿಸುತ್ತೆ ಕಸ ಆಯುವ ಯುವಕರ ಸುಮಧುರ ಧ್ವನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂತ್ರಮುಗ್ದಗೊಳಿಸುತ್ತೆ ಕಸ ಆಯುವ ಯುವಕರ ಸುಮಧುರ ಧ್ವನಿ

ಮಹೀಂದ್ರ & ಮಹೀಂದ್ರ ಕಂಪನಿ ಮಾಲೀಕ ಆನಂದ ಮಹೀಂದ್ರಾ ಟ್ವಿಟರ್ ಖಾತೆಯಲ್ಲಿ ಸುದ್ದಿಯಾಗ್ತಾನೇ ಇರ್ತಾರೆ. ಈ ಬಾರಿ ಕೂಡ ತಮ್ಮ ಟ್ವಿಟರ್ ಖಾತೆ ಮೂಲಕ ಎರಡು ಹಿಂದಿ ಹಾಡುಗಳನ್ನ ಟ್ವಿಟರ್​ ಟೈಮ್​ ಲೈನ್​ ಮೂಲಕ ಶೇರ್​ ಮಾಡಿದ್ದಾರೆ.

ಗೆಳೆಯ ರೋಹಿತ್​ ಖತ್ತರ್​ ಎಂಬವರು ಶೇರ್​ ಮಾಡಿದ ಹಫೀಜ್​ ಹಾಗೂ ಹಬಿಬುರ್​ ಹಾಡಿರುವ ಹಾಡುಗಳನ್ನ ಆನಂದ್​ ಮಹೀಂದ್ರಾ ಶೇರ್​ ಮಾಡಿದ್ದಾರೆ.

ಹಫೀಜ್​ ಹಾಗೂ ಹಬಿಬುರ್​​ ಇಬ್ಬರೂ ಕಸ ಆಯುವ ಕೆಲಸವನ್ನ ಮಾಡುತ್ತಾರೆ. ಆದರೆ ಇವರಿಬ್ಬರ ಧ್ವನಿಯಲ್ಲಿರುವ ಜಾದೂ ನೆಟ್ಟಿಗರನ್ನ ಮಂತ್ರಮುಗ್ಧರನ್ನಾಗಿಸಿದೆ. ಹೀಗಾಗಿ ಹಫೀಜ್​ ಹಾಗೂ ಹಬಿಬುರ್​ಗೆ ಸಂಗೀತ ಕಲಿಯಲು ಸಹಾಯ ಮಾಡಲು ಇಚ್ಛಿಸಿದ್ದಾರೆ. ಅವರು ಬೆಳಗ್ಗೆ ಕೆಲಸವನ್ನ ಮಾಡಿ ಸಂಜೆ ಸಂಗೀತ ಕೆಲಸ ಕಲಿಯಲು ಸಾಧ್ಯವಾಗುವಂತೆ ಮಾಡಲು ಅನುಕೂಲ ಮಾಡಿಕೊಡುವ ಯಾರಾದರೂ ಸಂಗೀತ ಗುರುಗಳಿದ್ದರೆ ಮಾಹಿತಿ ನೀಡುವಂತೆ ಕೇಳಿದ್ದಾರೆ.

ಹಫೀಜ್​ ಹಾಗೂ ಹಬಿಬುರ್​ 1969ರಲ್ಲಿ ತೆರೆ ಕಂಡ ಅನಮೋಲ್​ ಮೋತಿ ಸಿನಿಮಾದ ಏ ಜಾನ್​ ಚಮನ್​ ಹಾಗೂ 2010ರಲ್ಲಿ ತೆರೆಕಂಡ ಶಾರೂಖ್​ ಖಾನ್ ಅಭಿನಯದ ಸಿನಿಮಾ ʼಮೈ ನೇಮ್​ ಈಸ್​ ಖಾನ್ʼ​​ನಿಂದ ಸಜ್ದಾ ಹಾಡನ್ನ ಹಾಡಿದ್ದಾರೆ.

— anand mahindra (@anandmahindra) February 20, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...