alex Certify ನಿರಾಶ್ರಿತರ ಚಿಕಿತ್ಸೆಗೆ ಹಗಲಿರುಳು ಶ್ರಮಿಸಿದ್ದ ವೈದ್ಯ ಕೋವಿಡ್​ಗೆ ಬಲಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರಾಶ್ರಿತರ ಚಿಕಿತ್ಸೆಗೆ ಹಗಲಿರುಳು ಶ್ರಮಿಸಿದ್ದ ವೈದ್ಯ ಕೋವಿಡ್​ಗೆ ಬಲಿ….!

ಕೊರೊನಾ ಸೊಂಕಿಗೆ ಒಳಗಾಗಿದ್ದ ದೆಹಲಿಯ ವೈದ್ಯರೊಬ್ಬರು ಆಮ್ಲಜನಕ ಕೊರತೆಯಿಂದಾಗಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಕೊರೊನಾ ವೈರಸ್​ ಆರಂಭವಾದಾಗಿನಿಂದ ಈ ವೈದ್ಯ ಮನೆ ಮಠ ಎನ್ನದೇ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದರು.

ಆದರೆ ದೆಹಲಿಯಲ್ಲಿ ಯಾವುದೇ ಕಡೆ ಅವರಿಗೆ ಆಸ್ಪತ್ರೆ ಬೆಡ್​ ವ್ಯವಸ್ಥೆ ಆಗಿರಲಿಲ್ಲ. ಹೀಗಾಗಿ ಬಿಜಲ್ವಾನ್​ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಮಾಜಿ ಐಎಎಸ್​ ಅಧಿಕಾರಿ ಹರ್ಷ್ ಮಂದರ್​ ಹೇಳಿದ್ದಾರೆ.

ಡಾ. ಬಿಜಲ್ವಾನ್​​ ಕಳೆದ ವರ್ಷ ಕೊರೊನಾ ವೈರಸ್​ ಶುರುವಾದ ಬಳಿಕ ಸಪ್ಟೆಂಬರ್​ ತಿಂಗಳಲ್ಲಿ ಬೀದಿಗಳಲ್ಲಿ ಔಷಧಿ ಎಂಬ ಕಾರ್ಯಕ್ರಮದಡಿಯಲ್ಲಿ ಕೆಲಸ ಮಾಡಿದ್ದರು. ಮೀನಾ ಬಜಾರ್​ನಂತಹ ಏರಿಯಾಗಳಲ್ಲಿ ಸಣ್ಣ ಕೋವಿಡ್​ ಕ್ಲಿನಿಕ್​ಗಳನ್ನ ತೆರೆದಿದ್ದರು. ಕೇವಲ ಕೋವಿಡ್​ ಮಾತ್ರವಲ್ಲದೇ ಕಳೆದ ಅನೇಕ ವರ್ಷಗಳಿಂದ ಅವರು ಕ್ಷಯ ರೋಗಕ್ಕೆ ಒಳಗಾಗುತ್ತಿದ್ದ ನಿರಾಶ್ರಿತರಿಗೆ ಚಿಕಿತ್ಸೆ ನೀಡುತ್ತಿದ್ದರು.

ತಮಗೆ ಕೋವಿಡ್​ ಇದೆ ಎಂಬುದು ತಿಳಿಯುತ್ತಿದ್ದಂತೆಯೇ ಬಿಜಲ್ವಾನ್​ ಆಸ್ಪತ್ರೆಗಾಗಿ ಹುಡುಕಾಟ ನಡೆಸಿದ್ದರು. ಆದರೆ ಯಾವ ಆಸ್ಪತ್ರೆಗಳಲ್ಲಿಯೂ ಅವರಿಗೆ ಬೆಡ್​ ಸಿಗಲೇ ಇಲ್ಲ. ಕೊನೆಗೆ ಅವರು ಮನೆಯಲ್ಲಿ ಸ್ವಯಂ ಚಿಕಿತ್ಸೆ ಆರಂಭಿಸಿದ್ದರು. ಆದರೆ ಆಮ್ಲಜನಕದ ಕೊರತೆಯಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಹರ್ಷ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...