alex Certify ಬೆಚ್ಚಿಬೀಳಿಸುತ್ತೆ ಪಿಪಿಇ ಕಿಟ್‌ ಧರಿಸಿದ ವೈದ್ಯನ ಕೈ ಸ್ಥಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಪಿಪಿಇ ಕಿಟ್‌ ಧರಿಸಿದ ವೈದ್ಯನ ಕೈ ಸ್ಥಿತಿ

ಕೊರೊನಾ ವೈರಸ್‌ ಗೊಂದಲದ ನಡುವೆ ಬಹಳ ಒತ್ತಡಕ್ಕೆ ಸಿಲುಕಿರುವ ವೈದ್ಯಕೀಯ ಸಿಬ್ಬಂದಿಗೆ ಬಿಡುವು ಎಂದರೇನು ಎಂದು ಕೇಳುವಂತಾಗಿದೆ. ಕಳೆದ 5-6 ತಿಂಗಳುಗಳಿಂದ ಇವರದ್ದು ದಣಿವರಿಯದ ದುಡಿಮೆ ಆಗಿಬಿಟ್ಟಿದೆ.

ಈ ಕುರಿತು ಸಾಕಷ್ಟು ಮನಮುಟ್ಟುವ ಫೋಟೋಗಳು/ವಿಡಿಯೋಗಳು/ಮೆಮೆಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವೈದ್ಯಕೀಯ ಸಿಬ್ಬಂದಿ ವೈಯಕ್ತಿಕ ರಕ್ಷಣಾ ಸಲಕರಣೆ (PPE) ಧರಿಸುತ್ತಿರುವುದು ನಮ್ಮೆಲ್ಲರಿಗೂ ತಿಳಿದೇ ಇದೆ.

ಹಲವು ಸುತ್ತುಗಳ ಪ್ಲಾಸ್ಟಿಕ್‌ ಸೂಟ್‌ಗಳನ್ನು ಮೈಮೇಲೆ ಹಾಕಿಕೊಳ್ಳುವುದು ತ್ರಾಸದಾಯಕ ಕೆಲಸ. ಈ ಅನುಭವ ಹೇಗೆಲ್ಲಾ ಇರುತ್ತದೆ ಎಂದು ಖುದ್ದು ವೈದ್ಯರಾದ ಡಾ. ಸೈಯ್ಯದ್ ಫೈಜಾನ್ ಅಹಮದ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ವಿಪರೀತ ಆರ್ದ್ರಮಯ ವಾತಾವರಣದಲ್ಲಿ, ಪಿಪಿಇ ಧರಿಸಿ ವಿಪರೀತ ಬೆವರಿದ ಬಳಿಕ ನನ್ನ ಕೈಗಳು ಹೀಗೆ ಕಾಣುತ್ತಿವೆ” ಎಂದು ಫೈಜಾನ್‌ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...