alex Certify ಬಡ ಮಕ್ಕಳ ಅನುಕೂಲಕ್ಕಾಗಿ ಪೊಲೀಸ್​ ಠಾಣೆಯಲ್ಲಿ ʼಗ್ರಂಥಾಲಯʼ ಆರಂಭಿಸಿದ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಮಕ್ಕಳ ಅನುಕೂಲಕ್ಕಾಗಿ ಪೊಲೀಸ್​ ಠಾಣೆಯಲ್ಲಿ ʼಗ್ರಂಥಾಲಯʼ ಆರಂಭಿಸಿದ ಅಧಿಕಾರಿ

ದೆಹಲಿಯ ಆರ್​.ಕೆ. ಪುರಂ ಏರಿಯಾದ ಸಮೀಪದಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ಮಕ್ಕಳು ಅಪರಾಧದ ಹಾದಿಯನ್ನ ಹಿಡಿಯೋದನ್ನ ತಪ್ಪಿಸುವ ಸಲುವಾಗಿ ಪೊಲೀಸ್​ ಅಧಿಕಾರಿಯೊಬ್ಬರು ಅತ್ಯದ್ಭುತ ಮಾರ್ಗವೊಂದನ್ನ ಕಂಡುಕೊಂಡಿದ್ದಾರೆ. ದೆಹಲಿ ಪೊಲೀಸ್​ ಸಾರ್ವಜನಿಕ ಗ್ರಂಥಾಲಯದಲ್ಲಿ ಆರ್ಥಿಕವಾಗಿ ದುರ್ಬಲವಿರುವ ಕುಟುಂಬದ ಮಕ್ಕಳಿಗೆ ಓದಲು ಅವಕಾಶ ನೀಡಿದೆ.

ಸ್ಟೇಷನ್​ ಹೌಸ್​ ಅಧಿಕಾರಿ ರಾಜೇಶ್​ ಶರ್ಮಾ ಈ ಜಾಗವನ್ನ ಪತ್ರಿಕೆಗಳು, ಪುಸ್ತಕಗಳಿಂದ ತುಂಬಿಸುವ ಮೂಲಕ ಬೀದಿಯಲ್ಲಿ ಜೀವನ ಸಾಗಿಸುವ ಮಕ್ಕಳಿಗಾಗಿ ಸುಂದರವಾದ ಗ್ರಂಥಾಲಯವನ್ನ ಕಟ್ಟಿಕೊಟ್ಟಿದ್ದಾರೆ.

ಶಿಕ್ಷಣ ಹಾಗೂ ಸುರಕ್ಷಿತ ಜಾಗದ ಕೊರತೆ ಇರುವ ಈ ಪ್ರದೇಶದಲ್ಲಿ ಮಕ್ಕಳು ಬಹಳ ವೇಗವಾಗಿ ಡ್ರಗ್​ ಹಾಗೂ ಅಪರಾಧಗಳ ಕಡೆ ಆಕರ್ಷಿತರಾಗ್ತಿರ್ತಾರೆ. ಯುವ ಜನತೆ ಕೆಟ್ಟ ದಾರಿಯಲ್ಲಿ ಸಾಗದಂತೆ ನೋಡಿಕೊಳ್ಳೋದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ರಾಜೇಶ್​ ಶರ್ಮಾ ಹೇಳಿದ್ದಾರೆ.

ಈ ಗ್ರಂಥಾಲಯಕ್ಕೆ 70ಕ್ಕೂ ಹೆಚ್ಚು ಮಕ್ಕಳು ನಿತ್ಯ ಆಗಮಿಸಿ ಅಭ್ಯಾಸ ಮಾಡುತ್ತಾರಂತೆ. ಈ ಗ್ರಂಥಾಲಯದಲ್ಲಿ ಸ್ಮಾರ್ಟ್​ ಕ್ಲಾಸ್​​​ಗೂ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಕಂಪ್ಯೂಟರ್​ ಹಾಗೂ ಇಂಟರ್ನೆಟ್​ ಸೌಕರ್ಯವನ್ನೂ ಒದಗಿಸಲಾಗಿದೆ.

ಕಳೆದ ಒಂದು ವರ್ಷದಿಂದ ಮಕ್ಕಳಿಗೆ ಶಾಲೆಗೆ ಹೋಗಲೂ ಆಗ್ತಿಲ್ಲ. ಸ್ಲಮ್​ಗಳಲ್ಲಿ ವಾಸ ಮಾಡುವ ಮಕ್ಕಳಿಗೆ ಮನೆಯಲ್ಲಿ ಶಾಂತವಾಗಿ ವ್ಯಾಸಂಗ ಮಾಡೋಕೆ ಪ್ರಾಶಸ್ತ್ಯವಾದ ಸ್ಥಳದ ಕೊರತೆ ಇದೆ. ಹೀಗಾಗಿ ನಾವು ಈ ಹೊಸ ಐಡಿಯಾವನ್ನ ಸಾಕಾರಗೊಳಿಸಿದ್ದೇವೆ ಎಂದು ರಾಜೇಶ್​ ಶರ್ಮಾ ಹೇಳಿದ್ದಾರೆ.

ಎನ್​ಜಿಓ ಒಂದರ ಸಹಭಾಗಿತ್ವದಲ್ಲಿ ಈ ಗ್ರಂಥಾಲಯ ನಿರ್ಮಾಣ ಮಾಡಲಾಗಿದ್ದು ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಉಚಿತ ತರಬೇತಿಯನ್ನೂ ನೀಡಲಾಗ್ತಿದೆ. ಈ ಗ್ರಂಥಾಲಯದಲ್ಲಿ 2300 ಪುಸ್ತಕಗಳು, 1900ಕ್ಕೂ ಹೆಚ್ಚು ಮ್ಯಾಗ್ಜಿನ್​ಗಳು ಹಾಗೂ 15ಕ್ಕೂ ಹೆಚ್ಚು ದಿನ ಪತ್ರಿಕೆಗಳಿವೆ. ಇದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತದೆ. ಇಲ್ಲಿ ಒಂದು ಬಾರಿಗೆ 100 ಮಕ್ಕಳು ಅಭ್ಯಾಸ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...