alex Certify ಕೆಲಸ ಕೊಡಿಸುವುದಾಗಿ ನಂಬಿಸಿ 300 ಜನರಿಗೆ ವಂಚನೆ ಮಾಡಿದ ಮಹಿಳೆಯರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಕೊಡಿಸುವುದಾಗಿ ನಂಬಿಸಿ 300 ಜನರಿಗೆ ವಂಚನೆ ಮಾಡಿದ ಮಹಿಳೆಯರು ಅರೆಸ್ಟ್

ನಕಲಿ ಪ್ಲೇಸ್‌ಮೆಂಟ್ ಏಜೆನ್ಸಿ ನಡೆಸಿಕೊಂಡು 300ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ಹುಟ್ಟಿಸಿ ಮೋಸ ಮಾಡಿದ್ದ ಏಳು ಮಹಿಳೆಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿಕೊಂಡು ನಕಲಿ ನೇಮಕಾತಿ ಪತ್ರಗಳನ್ನು ಕೊಟ್ಟು ವಂಚಿಸಿದ್ದ ಈ ಮಹಿಳೆಯರನ್ನು ಪಶ್ಚಿಮ ದೆಹಲಿಯ ರಮೇಶ್‌ ನಗರದ ಕಟ್ಟಡವೊಂದರ ಮೇಲೆ ರೇಡ್ ಮಾಡಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಲ್‌ ಸೆಂಟರ್‌ ಒಂದರ ಮುಖಾಂತರ ಈ ಏಜೆನ್ಸಿಯನ್ನು ನಡೆಸಲಾಗುತ್ತಿತ್ತು.

ಆಪಾದಿತರನ್ನು ಜ್ಯೋತಿ (29), ಸುಶ್ಮಿತಾ (26), ರೋಶ್ನಿ (24), ಛಾಯಾ (21), ಆಕಾಂಕ್ಷಾ ಶರ್ಮಾ (21), ಪೂಜಾ (21) ಹಾಗೂ ರೇಖಾ (23) ಎಂದು ಗುರುತಿಸಲಾಗಿದೆ.

“ವಿಮಾನ ನಿಲ್ದಾಣಗಳು ಹಾಗು ಸರ್ಕಾರೀ & ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ, ಜನರನ್ನು ವಂಚಿಸುತ್ತಿದ್ದ ಇವರು, ಮೊದಲಿಗೆ 2,500 ರೂಗಳನ್ನು ನೋಂದಣಿ ಶುಲ್ಕವನ್ನಾಗಿ ಪಾವತಿಸಿ ಬಳಿಕ ಸಮವಸ್ತ್ರ, ಭದ್ರತೆ ಹಾಗೂ ಇತರ ಶುಲ್ಕಗಳ ರೂಪದಲ್ಲಿ ಹೆಚ್ಚು ಮೊತ್ತ ಪಾವತಿ ಮಾಡಲು ಸಂತ್ರಸ್ತರಿಗೆ ಕೋರುತ್ತಿದ್ದರು,” ಎಂದು ಡಿಸಿಪಿ ಉರ್ವಿಜಾ ಗೋಯೆಲ್ ತಿಳಿಸಿದ್ದಾರೆ.

ಈ ಎಲ್ಲರನ್ನೂ ಐಪಿಸಿಯ 420ನೇ ವಿಧಿ (ವಂಚನೆ), ಹಾಗೂ ಐಡಿ ಕಾಯಿದೆಯ ಸಂಬಂಧ ಪಟ್ಟ ವಿಧಿಗಳ ಅಡಿ ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರ ಬಳಿ ಇದ್ದ ಸಂತ್ರಸ್ತರ ವೈಯಕ್ತಿಕ ಮಾಹಿತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂಥದ್ದೇ ಮಾರ್ಗದಲ್ಲಿ ತನ್ನನ್ನು ಸಂಪರ್ಕಿಸಿ, ತನಗೂ 32,000ರೂ.ಗಳಷ್ಟು ವಂಚನೆ ಮಾಡಿದ್ದಾಗಿ ದೆಹಲಿ ಪಶ್ಚಿಮ ಜಿಲ್ಲೆಯ ಸೈಬರ್‌ ಸೆಲ್‌ಗೆ ಇ-ಮೇಲ್ ಮಾಡಿದ್ದ ಸಂತ್ರಸ್ತರೊಬ್ಬರು ಕೊಟ್ಟ ಮಾಹಿತಿ ಮೇಲೆ ಪೊಲೀಸರು ಕಾಯೋನ್ಮತ್ತರಾಗಿ ಮೇಲ್ಕಂಡವರನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...