alex Certify ಮದುವೆಗಾಗಿ ಸಾಕಿದ್ದ 500 ಕೋಳಿಗಳನ್ನು ಅಕ್ಕಪಕ್ಕದವರಿಗೆ ನೀಡ್ತಿದ್ದಾನೆ ವರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗಾಗಿ ಸಾಕಿದ್ದ 500 ಕೋಳಿಗಳನ್ನು ಅಕ್ಕಪಕ್ಕದವರಿಗೆ ನೀಡ್ತಿದ್ದಾನೆ ವರ…!

ಲಾಕ್ ಡೌನ್ ಅನೇಕರ ಮದುವೆ ರದ್ದು ಮಾಡಿದೆ. ಮತ್ತೆ ಕೆಲವರು ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಡೆಹ್ರಾಡೂನ್ ನ ಪನಿಯಾಲಿ ರಾಣಾ ಕುಟುಂಬಸ್ಥರಿಗೆ ಒಂದು ಸಮಸ್ಯೆ ಕಾಡಿದೆ.

ರಾಣಾನ ಮದುವೆ ಏಪ್ರಿಲ್ 13ರಂದು ನಡೆಯಬೇಕಿತ್ತು. ಏಪ್ರಿಲ್ 15ರವರೆಗೆ ಮದುವೆ ಪಾರ್ಟಿ ನಡೆಯಲಿತ್ತು. ಇದಕ್ಕಾಗಿ ಮನೆಯಲ್ಲಿ 500 ಕೋಳಿಗಳನ್ನು ಸಾಕಿದ್ದರು.

ಲಾಕ್ ಡೌನ್ ಮೇ 3ರವರೆಗೆ ಮುಂದೂಡಲಾಗಿದೆ. ಹಾಗಾಗಿ ಸಾಕಿದ್ದ ಕೋಳಿಗಳ ಕಥೆಯೇನು ಎಂಬ ಪ್ರಶ್ನೆ ಉದ್ಭವಿಸಿದೆ. ಕೋಳಿಗಳನ್ನು ಮಾರಾಟ ಮಾಡಲು ಸಾಧ್ಯವಾಗ್ತಿಲ್ಲ. ಕೋಳಿಗಳನ್ನು ಇನ್ನಷ್ಟು ದಿನ ಸಾಕಲು ಸಾಧ್ಯವಿಲ್ಲ.

ಹಾಗಾಗಿ ರಾಣಾ ಕುಟುಂಬಸ್ಥರು ಕೋಳಿಯನ್ನು ಅಕ್ಕಪಕ್ಕದವರಿಗೆ ನೀಡ್ತಿದ್ದಾರೆ. ಮದುವೆಗೆ ಸಾಕಷ್ಟು ತಯಾರಿ ನಡೆಸಲಾಗಿತ್ತು. ಆದ್ರೆ ಮದುವೆ ನಿಂತ ಕಾರಣ ಎಲ್ಲ ಹಣ ವ್ಯರ್ಥವಾಯ್ತು ಎಂದು ರಾಣಾ ಹೇಳಿದ್ದಾನೆ.

ಕೋಳಿಗಳನ್ನು ಇನ್ನಷ್ಟು ದಿನ ಸಾಕುವುದು ಕಷ್ಟ. ಹಾಗಾಗಿ ಕೋಳಿಗಳನ್ನು ಅಕ್ಕಪಕ್ಕದವರಿಗೆ ನೀಡ್ತಿದ್ದೇವೆ. ಲಾಕ್ ಡೌನ್ ಮುಗಿದ ಮೇಲೆ ಸರಳವಾಗಿ ಮದುವೆಯಾಗುವ ಬಗ್ಗೆ ಆಲೋಚನೆ ಮಾಡ್ತಿದ್ದೇವೆಂದು ರಾಣಾ ಹೇಳಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...