alex Certify ಅಬ್ಬಾ….! ಈ ದೃಶ್ಯ ನೋಡಿದ್ರೇನೆ ಭಯವಾಗುತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ….! ಈ ದೃಶ್ಯ ನೋಡಿದ್ರೇನೆ ಭಯವಾಗುತ್ತೆ

Daredevil Haryana 'Kid' Puts up Fight with a Bull to Save Grandmother, Twitter is Impressed

ಬೆಳಗ್ಗಿನ ವಾಕಿಂಗ್ ಗೆ ತೆರಳಿದ ವೃದ್ಧೆ ಹಾಗೂ ಆಕೆಯ ರಕ್ಷಣೆಗೆ ಬಂದ ಮೊಮ್ಮಗನ ಮೇಲೆ ಸೊಕ್ಕಿದ ಗೂಳಿ ದಾಳಿ ಮಾಡಿದ್ದು, ಮಹೇಂದ್ರಘರ್ ಎಂಬ ಪ್ರದೇಶದ ಗೋಶಾಲಾ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಅಂಗೂರಿ ದೇವಿ ಎಂಬ 70 ವರ್ಷದ ವೃದ್ಧೆ ಬೆಳಗಿನ ವಾಕಿಂಗ್ ಮಾಡುವಾಗ ಗೂಳಿ ದಾಳಿ ಮಾಡುತ್ತದೆ. ಆಕೆಯನ್ನು ರಕ್ಷಿಸಲು ಬಂದ 20 ವರ್ಷದ ಮೊಮ್ಮಗನನ್ನೂ ಎತ್ತಿ ಹಾಕುತ್ತದೆ. ಎರಡು ಬಾರಿ ದಾಳಿಗೆ ಒಳಗಾದರೂ ಯುವಕ ಅಜ್ಜಿಯನ್ನು ಬಿಡದೇ ರಕ್ಷಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ಗೂಳಿಯ ಉಗ್ರ ಸ್ವರೂಪದ 29 ಸೆಕೆಂಡ್ ಗಳ ಸಿಸಿ ಟಿವಿ ಫುಟೇಜ್ ನ್ನು ಪತ್ರಕರ್ತ ಅಮಿತ್ ಸಿಂಗ್ ಟ್ವೀಟ್ ಮಾಡಿದ್ದಾರೆ. ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೃಶ್ಯ ನೋಡಿದರೇ ಭಯ ಹುಟ್ಟುವಂತಿದೆ.

ಗೂಳಿಯ ದಾಳಿಗೆ ಒಳಗಾದ ಇಬ್ಬರನ್ನು ರಕ್ಷಿಸಲು ಬೇರೆಯವರು ಬರಲೂ ಹೆದರುತ್ತಿರುವುದು ವಿಡಿಯೋ ಕ್ಲಿಪ್ ನಲ್ಲಿ ಕಂಡು ಬರುತ್ತದೆ. ಏಕೆಂದರೆ ಇಕ್ಕಟ್ಟಾದ ಪ್ರದೇಶ ಅದಾಗಿದ್ದು, ಮಧ್ಯದಲ್ಲಿ ನಿಂತ ಗೂಳಿ ದಾಳಿ ಶುರು ಮಾಡಿದೆ. ಅದನ್ನು ದಾಟಿ ಬರಲು ಮುಂದಾದ ಯುವಕನನ್ನು ತನ್ನ ಕೋಡಿನಿಂದ ಹೊಸಕಿ ಹಾಕಲು ಮುಂದಾಗಿತ್ತು. ನಂತರ ಅಜ್ಜಿ ಜಾಗೂ ಮೊಮ್ಮಗ ಇಬ್ಬರನ್ನೂ ಒಮ್ಮೆಲೇ ತನ್ನ ಕೋಡಿನಿಂದ ಎತ್ತಿ ನಾಲ್ಕೈದು ಅಡಿ ಆಚೆ ಒಗೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...