alex Certify ಬೀದಿಯಲ್ಲಿ ಬಿದ್ದ ಹಣ್ಣುಗಳನ್ನು ಗಡಿಬಿಡಿಯಲ್ಲಿ ತಿಂದ ಆನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿಯಲ್ಲಿ ಬಿದ್ದ ಹಣ್ಣುಗಳನ್ನು ಗಡಿಬಿಡಿಯಲ್ಲಿ ತಿಂದ ಆನೆ

ರಸ್ತೆಯಲ್ಲಿ ಹರಡಿ ಬಿದ್ದ ಹಣ್ಣುಗಳನ್ನು ಆನೆಯೊಂದು ಹೆಕ್ಕಿ ತಿನ್ನುವ ವಿಡಿಯೋ ವೈರಲ್ ಆಗಿದೆ. ವಾಹನ ದಟ್ಟಣೆ ಇರುವ ರಸ್ತೆಯ ಪಕ್ಕ ಇರುವ ಹಣ್ಣಿನ ಅಂಗಡಿಯಿಂದ ಒಂದಿಷ್ಟು ಹಣ್ಣುಗಳು ಬಿದ್ದು ಬಿಡುತ್ತವೆ. ಅಂಗಡಿ ಮಾಲೀಕ ಅದನ್ನು ಗಡಿಬಿಡಿಯಲ್ಲಿ ಹೆಕ್ಕಿ ಆದಷ್ಟು ಹಣ್ಣನ್ನು ಉಳಿಸಿಕೊಳ್ಳಲು ಯತ್ನಿಸುತ್ತಾನೆ.

ಅಷ್ಟೇ ವೇಗದಲ್ಲಿ ಬಂದ ಆನೆಯೊಂದು ಅವನ್ನು ಹೆಕ್ಕಿ ತಿನ್ನುತ್ತದೆ. ಕಾರಿನಿಂದ ಇದನ್ನು ವಿಡಿಯೋ ಮಾಡಿದ್ದು, “ವೆಲ್ ಐ ಡಿಡಂಟ್ ಎಕ್ಸ್ ಪೆಕ್ಟ್ ದ್ಯಾಟ್ ಟು ಹ್ಯಾಪನ್” ಎಂದು ಕ್ಯಾಪ್ಶನ್ ಬರೆದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.

3.4 ಮಿಲಿಯನ್ ಜನ ಅದನ್ನು ವೀಕ್ಷಿಸಿದ್ದು, 2.3 ಲಕ್ಷ ಲೈಕ್ ಗಳು ಬಂದಿವೆ. “ದಾನೆ ದಾನೆ ಪೆ ಲಿಖಾ ಹೆ ಖಾನೆವಾಲೋಕಾ ನಾಮ್” ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...