alex Certify ಧರ್ಮದ ಕಾರಣಕ್ಕೆ ವಿವಾದಕ್ಕೆ ಗುರಿಯಾಯ್ತು ವೈದ್ಯಕೀಯ ವಿದ್ಯಾರ್ಥಿಗಳ ನೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧರ್ಮದ ಕಾರಣಕ್ಕೆ ವಿವಾದಕ್ಕೆ ಗುರಿಯಾಯ್ತು ವೈದ್ಯಕೀಯ ವಿದ್ಯಾರ್ಥಿಗಳ ನೃತ್ಯ

ಕೆಲ ದಿನಗಳ ಹಿಂದೆ ಸೋಶಿಯಲ್​ ಮೀಡಿಯಾದಲ್ಲಿ ಡ್ಯಾನ್ಸ್​ ವಿಡಿಯೋವೊಂದು ಭಾರೀ ವೈರಲ್​ ಆಗಿತ್ತು. ಇದರಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಕೇರಳದ ತ್ರಿಶೂರ್​ ಮೆಡಿಕಲ್​ ಕಾಲೇಜಿನಲ್ಲಿ ನೃತ್ಯ ಮಾಡಿದ್ದರು.

ಈ ವಿಡಿಯೋದಲ್ಲಿ ನವೀನ್​ ಕೆ. ರಜಾಕ್​ ಹಾಗೂ ಜಾನಕಿ ಓಂಕುಮಾರ್​ ಎಂಬವರು 1978ರ ಹಿಟ್​ ಸಾಂಗ್​ ರಾಸ್​ಪುಟಿನ್​ಗೆ ಭರ್ಜರಿ ಹೆಜ್ಜೆ ಹಾಕಿದ್ದರು. ಕಾಲೇಜು ಕಾರಿಡಾರಿನಲ್ಲಿ ನೃತ್ಯ ಮಾಡಿದ್ದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿತ್ತು.

ಮೊದ ಮೊದಲು ಇವರಿಬ್ಬರ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದರು. ಆದರೆ ಈಗ ಇದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇಲ್ಲಿ ನೃತ್ಯ ಮಾಡಿದ ಯುವಕನ ಹೆಸರು ನವೀನ್​ ಕೆ. ರಜಾಕ್​​ ಆಗಿದ್ದರಿಂದ ಇದು ಕಟ್ಟಾ ಹಿಂದೂವಾದಿಗಳನ್ನ ಕೆರಳಿಸಿದೆ.

ಇಲ್ಲಿ ನೃತ್ಯ ಮಾಡಿದವರ ಹೆಸರು ಜಾನಕಿ ಓಮ್​​ಕುಮಾರ್​ ಹಾಗೂ ನವೀನ್​ ಕೆ. ರಜಾಕ್​. ನನಗೆ ಇಲ್ಲೇನೋ ಸಂಶಯಾಸ್ಪದ ಸಂಗತಿ ಎಂದೆನಿಸುತ್ತಿದೆ. ಜಾನಕಿ ಪೋಷಕರು ಆದಷ್ಟು ಎಚ್ಚರದಿಂದ ಇರೋದು ಉತ್ತಮ ಎಂದು ವಕೀಲ ಕೃಷ್ಣ ರಾಜ್​ ಬರೆದಿದ್ದಾರೆ.

ಇದೇ ರೀತಿಯ ಸಾಕಷ್ಟು​ ಕಮೆಂಟ್​​ಗಳು ಸೋಶಿಯಲ್​ ಮೀಡಿಯಾದಲ್ಲಿ ತುಂಬಿ ಹೋಗಿದೆ. ಅನೇಕರು ಇವರಿಬ್ಬರ ನಡುವೆ ಲವ್​ ಜಿಹಾದ್​ ಆಗಬಹುದು ಎಂದು ಶಂಕಿಸುತ್ತಿದ್ದಾರೆ.

View this post on Instagram

A post shared by Naveen K Razak (@naveen_k_razak)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...