alex Certify ಸೈಕಲ್​ ಸವಾರಿ ಮಾಡಿ ಫೇಮಸ್​ ಆಗಿದ್ದಾರೆ ಈ ಉಪಮೇಯರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕಲ್​ ಸವಾರಿ ಮಾಡಿ ಫೇಮಸ್​ ಆಗಿದ್ದಾರೆ ಈ ಉಪಮೇಯರ್​..!

Maha's cycle samaritan' pedals away to solve citizens' issuesಸಾಮಾನ್ಯವಾಗಿ ಪಾಲಿಕೆ ಮೇಯರ್​ ಅಂದ್ರೆ ಕಾರಲ್ಲಿ ಓಡಾಡ್ತಾರೆ. ಏನಾದ್ರೂ ಅವಘಡ ಆಯ್ತು ಅಂದಲ್ಲಿ ಮಾತ್ರ ಆ ಕ್ಷೇತ್ರಕ್ಕೊಂದು ವಿಸಿಟ್​ ಕೊಡ್ತಾರೆ. ಆದರೆ ಕೊಲ್ಹಾಪುರ ಮುನ್ಸಿಪಲ್​ ಕಾರ್ಪೋರೇಷನ್​​ನ ಉಪಮೇಯರ್​ ಈ ಎಲ್ಲಾ ಅಪವಾದಗಳಿಗೆ ವಿರುದ್ಧವಾಗಿ ನಿಂತಿದ್ದಾರೆ.

ಬೆಳಗ್ಗೆ 7 ಗಂಟೆಗೆ ಸೈಕಲ್​ನಲ್ಲಿ ಸವಾರಿ ಶುರು ಮಾಡುವ ಸಂಜಯ್​ ಮೋಹಿತೆ ಸಣ್ಣ ಗಲ್ಲಿಯಿಂದ ಹಿಡಿದು ದೊಡ್ಡ ನಗರದವರೆಗೆ ಸಂಚರಿಸಿ ಜನರ ಕಷ್ಟವನ್ನ ಖುದ್ದು ಆಲಿಸ್ತಾರೆ.

ಕಾಂಗ್ರೆಸ್​ ಪಕ್ಷದ ಈ ನಾಯಕ ಕಳೆದ 5 ವರ್ಷಗಳಿಂದ ಪ್ರತಿದಿನ ಬೆಳಗ್ಗೆ 2 ಗಂಟೆಗಳ ಸಮಯವನ್ನ ಸೈಕಲ್​ ಸವಾರಿಗಾಗಿ ಮೀಸಲಿಟ್ಟಿದ್ದಾರೆ. ದಿನಾ ಮನೆಗೆ ನ್ಯೂಸ್​ ಪೇಪರ್​ ಹಾಕುವ ಹುಡುಗನಿಂದ ಹಿಡಿದು ವೃದ್ಧರವರೆಗೂ ಸಂಜಯ್​ ಎಲ್ಲರ ಕಷ್ಟವನ್ನ ಆಲಿಸ್ತಾರೆ.

ಚರಂಡಿ ನೀರಿನ ಸಮಸ್ಯೆ, ಬೀದಿ ದೀಪದ ಸಮಸ್ಯೆ, ನೀರಿನ ಸಮಸ್ಯೆ, ರಸ್ತೆ ದುರಸ್ಥಿ ಕಾರ್ಯ ಹೀಗೆ ತನ್ನ ಸೈಕಲ್​ ಸವಾರಿ ವೇಳೆಗೆ ಬೆಳಕಿಗೆ ಬಂದ ಎಲ್ಲಾ ಸಮಸ್ಯೆಗಳನ್ನ ಉಪಮೇಯರ್​ ಅತ್ಯಂತ ಶೀಘ್ರದಲ್ಲಿ ಪರಿಹಾರ ಮಾಡುವ ಮೂಲಕ ಜನರ ಅಚ್ಚುಮೆಚ್ಚಿನ ನಾಯಕ ಎನಿಸಿಕೊಂಡಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಉಪಮೇಯರ್​​ ಸಂಜಯ್​, ನಾನು ಗಾಂಧೀಜಿಯವರ ಸರಳತೆಯಿಂದ ಸ್ಫೂರ್ತಿ ಪಡೆದು ಈ ಕೆಲಸ ಮಾಡುತ್ತಿದ್ದೇನೆ. ನನ್ನ ನಿತ್ಯದ ಸೈಕಲ್​ ಸವಾರಿಯಿಂದಾಗಿ ಇಡೀ ವಾರ್ಡ್​ ಜನರು ನನ್ನನ್ನ ವೈಯಕ್ತಿಕವಾಗಿ ಅರ್ಥ ಮಾಡಿಕೊಳ್ತಾರೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...