alex Certify ಕೊರೊನಾ ಲಸಿಕೆಗಾಗಿ Co-WIN ಅಪ್ಲಿಕೇಷನ್‌ ನಲ್ಲಿ ಹೆಸರು ನೋಂದಾಯಿಸೋದು ಹೇಗೆ…? ಇಲ್ಲಿದೆ ಕಂಪ್ಲೀಟ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆಗಾಗಿ Co-WIN ಅಪ್ಲಿಕೇಷನ್‌ ನಲ್ಲಿ ಹೆಸರು ನೋಂದಾಯಿಸೋದು ಹೇಗೆ…? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಭಾರತ ಮಾರ್ಚ್ 1ರಿಂದ ಆರಂಭವಾಗಲಿರುವ ಇನ್ನೊಂದು ಹಂತದ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ಗೆ ಸರ್ವ ಸನ್ನದ್ಧವಾಗಿದೆ. 60 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟ ಅನಾರೋಗ್ಯ ಹೊಂದಿರುವವರು ಈ ಬಾರಿ ಲಸಿಕೆ ವಿತರಣೆಗೆ ಅರ್ಹರಾಗಿದ್ದಾರೆ.
ಮಾರ್ಚ್​ 1ರಿಂದ ಆರಂಭವಾಗಲಿರುವ ಕೊರೊನಾ ಲಸಿಕೆ ಅಭಿಯಾನಕ್ಕೆ ಅರ್ಹರಾದ ಅಭ್ಯರ್ಥಿಗಳು ಸರ್ಕಾರದ ಕೋವಿನ್​ ಅಪ್ಲಿಕೇಶನ್​ ಮೂಲಕ ಲಸಿಕೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

10 ಸಾವಿರ ಸರ್ಕಾರಿ ಆಸ್ಪತ್ರೆ ಹಾಗೂ 20 ಸಾವಿರಕ್ಕೂ ಹೆಚ್ಚು ಖಾಸಗಿ ಕೇಂದ್ರಗಳಲ್ಲಿ ಮಾರ್ಚ್ 1ರಿಂದ ಕೊರೊನಾ ಲಸಿಕೆ ವಿತರಣೆ ಮಾಡಲಾಗುತ್ತೆ. ಸರ್ಕಾರದಿಂದ ಈ ಲಸಿಕೆ ಉಚಿತವಾಗಿ ಸಿಗಲಿದೆ.

ಕೋವಿನ್​ ಅಪ್ಲಿಕೇಶನ್​ ಮೂಲಕ ಜನತೆ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆದರೆ ಅಭ್ಯರ್ಥಿಗಳಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳಲ್ಲಿ ಯಾವುದಾದರೂ ಒಂದನ್ನ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನ ನೀಡಲಾಗಿಲ್ಲ. ಆದರೆ ಲಸಿಕೆ ದಿನಾಂಕ ಹಾಗೂ ಕೇಂದ್ರವನ್ನ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Co-WIN app ಅಥವಾ cowin.gov.in ವೆಬ್​ಸೈಟ್​ಗೆ ಹೋಗಿ

ಕೊಟ್ಟಿರುವ ಜಾಗದಲ್ಲಿ ನಿಮ್ಮ ಮೊಬೈಲ್​ ಹಾಗೂ ಆಧಾರ್​ ಸಂಖ್ಯೆಯನ್ನು ನಮೂದಿಸಿ

ನಿಮಗೆ ಬರುವ ಒಟಿಪಿಯನ್ನ ನೊಂದಾಯಿಸಿದ ಬಳಿಕ ನಿಮ್ಮ ಖಾತೆ ರಚನೆಯಾಗಲಿದೆ.

ಇಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರ ಖಾತೆಯನ್ನೂ ರಚಿಸಬಹುದಾಗಿದೆ.

ಇದಾದ ಬಳಿಕ ನಿಗದಿತ ದಿನಾಂಕದಂದು ಲಸಿಕೆ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಿರಿ

ನಿಮ್ಮ ಐಡಿ ಸಂಖ್ಯೆಯನ್ನ ನೀಡುವ ಮೂಲಕ ಲಸಿಕೆ ಸ್ವೀಕಾರ ಪ್ರಮಾಣ ಪತ್ರ ಪಡೆಯಿರಿ

45 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ತಮಗೆ ಅನಾರೋಗ್ಯ ಇರೋದ್ರ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸೋದು ಕಡ್ಡಾಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...