alex Certify ಕೋವಿಡ್-19 ರೋಗಿಗಳ ’ಮಿತ್ರ’ ಈ ರೋಬೊಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19 ರೋಗಿಗಳ ’ಮಿತ್ರ’ ಈ ರೋಬೊಟ್

ನಾವೆಲ್ ಕೊರೋನಾ‌ ವೈರಸ್ ಪಿಡುಗಿನಿಂದ ಬಳಲುತ್ತಿರುವ ಮಂದಿಯ ಸೇವೆಗೆಂದು ದೆಹಲಿಯ ಅಸ್ಪತ್ರೆಯೊಂದರಲ್ಲಿ ಗ್ರಾಹಕ-ಸೇವಾ ರೋಬೊಟ್ ಗಸ್ತಿನ ವ್ಯವಸ್ಥೆ ಮಾಡಲಾಗಿದೆ.

ಮಿತ್ರ ಹೆಸರಿನ ಈ ರೋಬೊಟ್‌, 2017ರಲ್ಲಿ ಹೈದರಾಬಾದ್‌ಗೆ ಭೇಟಿ ನೀಡಿದ್ದ ಇವಾಂಕಾ ಟ್ರಂಪ್‌ಗೆ ಅಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಂವಹನ ನಡೆಸಿ ಖ್ಯಾತಿ ಪಡೆದಿತ್ತು. ಫೇಸ್‌ ರಕಾಗ್ನಿಷನ್ ತಂತ್ರಜ್ಞಾನದ ಈ ರೋಬೊಟ್‌, ರೋಗಿಗಳ ಮುಖಗಳನ್ನು ತನ್ನ ಸ್ಮೃತಿಪಟಲದಲ್ಲಿ ಕಾಪಿಟ್ಟುಕೊಳ್ಳುತ್ತದೆ.

ಇದರ ಎದೆಗೆ ಅಂಟಿಸಿರುವ ಟ್ಯಾಬ್ಲೆಟ್ ಮೂಲಕ ರೋಗಿಗಳು ತಮ್ಮ ಆಪ್ತರೊಂದಿಗೆ ವಿಡಿಯೋ ಕಾಲ್ ಮಾಡಲು ನೆರವಾಗುವುದಲ್ಲದೇ, ಅವರಿಗೆ ಶುಶ್ರೂಷೆ ಮಾಡುವ ವೈದ್ಯರಿಗೆ ಸಂಪರ್ಕ ಸಾಧಿಸಲು ಅನುವಾಗುತ್ತಿವೆ.

View this post on Instagram

The Story of Mitra Robot #vocalaboutlocal

A post shared by Invento Robotics (@inventorobotics) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...