alex Certify BIG NEWS: ಸಲೂನ್ ಗೆ ಹೋಗಲು ಆಧಾರ್ ಕಾರ್ಡ್ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಲೂನ್ ಗೆ ಹೋಗಲು ಆಧಾರ್ ಕಾರ್ಡ್ ಕಡ್ಡಾಯ

ದೇಶದಲ್ಲಿ ಲಾಕ್‌ಡೌನ್ 5 ಮತ್ತು ಅನ್‌ಲಾಕ್  01  ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಅನೇಕ ವಿಷಯಗಳಲ್ಲಿ ರಿಯಾಯಿತಿಯನ್ನು ನೀಡಲಾಗಿದೆ. ದೇಶದ ಹೆಚ್ಚಿನ ರಾಜ್ಯಗಳು ಸಲೂನ್ ತೆರೆಯಲು ಅನುಮತಿ ನೀಡಿವೆ. ಆದರೆ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿವೆ.

ತಮಿಳುನಾಡು ಸರ್ಕಾರ ಸಲೂನ್ ಮಾರ್ಗಸೂಚಿಯಲ್ಲಿ ಆಧಾರ್ ಕಡ್ಡಾಯ ಮಾಡಿದೆ. ಕ್ಷೌರ ಮಾಡಿಸಲು ಸಲೂನ್ ಗೆ ಹೋಗುವ ವ್ಯಕ್ತಿ ಆಧಾರ್ ಕಾರ್ಡ್ ತೋರಿಸಬೇಕು. ಇಲ್ಲವಾದ್ರೆ ಸಲೂನ್‌ ಮಾಲೀಕರು ಬರುವ ಪ್ರತಿಯೊಬ್ಬ ಗ್ರಾಹಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ದಾಖಲಾಗಿ ಇಟ್ಟುಕೊಳ್ಳಬೇಕು.

ಜೂನ್ 1 ರಿಂದ ರಾಜ್ಯದ ಎಲ್ಲಾ ಸಲೂನ್ ಮತ್ತು ಬ್ಯೂಟಿ ಪಾರ್ಲರ್‌ಗಳು ತೆರೆದಿವೆ. ಅವುಗಳನ್ನು ತೆರೆಯಲು ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರಲ್ಲಿ ಸಾಮಾಜಿಕ ಅಂತರ, ಸ್ವಚ್ಛತೆ, ಮಾಸ್ಕ್, ಹ್ಯಾಂಡ್ ಗ್ಲೋಸ್ ಹಾಗೂ ಗ್ರಾಹಕರು ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ. ಯಾವುದೇ ವ್ಯಕ್ತಿಯು ಈ ಕ್ರಮವನ್ನು ಅನುಸರಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...