alex Certify ಕೋವ್ಯಾಕ್ಸಿನ್-ಸ್ಪುಟ್ನಿಕ್ ವಿ ತೆಗೆದುಕೊಂಡು ಅಮೆರಿಕಾಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವ್ಯಾಕ್ಸಿನ್-ಸ್ಪುಟ್ನಿಕ್ ವಿ ತೆಗೆದುಕೊಂಡು ಅಮೆರಿಕಾಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್..!

ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಸಿಕ್ಕಿದೆ. ಅಮೆರಿಕಾದ 400ಕ್ಕೂ ಹೆಚ್ಚು ಕಾಲೇಜುಗಳು ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ಹೊರಡಿಸಿವೆ. ಕಾಲೇಜುಗಳು ಡಬ್ಲ್ಯುಎಚ್ ಒ ಅನುಮೋದಿಸಿದ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿವೆ. ಇದ್ರಿಂದಾಗಿ ಭಾರತ ಹಾಗೂ ರಷ್ಯಾ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ.

ಭಾರತದಲ್ಲಿ ತಯಾರಾದ ಕೋವಾಕ್ಸಿನ್ ಹಾಗೂ ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿಯನ್ನು ಡಬ್ಲ್ಯುಎಚ್‌ಒ ಅನುಮೋದಿಸಿಲ್ಲ. ಹಾಗಾಗಿ ಕೊವಾಕ್ಸಿನ್ ಅಥವಾ ಸ್ಪುಟ್ನಿಕ್-ವಿ ಲಸಿಕೆ ತೆಗೆದುಕೊಂಡ ವಿದ್ಯಾರ್ಥಿಗಳು ಅಮೆರಿಕಕ್ಕೆ ಹೋದ ನಂತರ ಮತ್ತೆ ಲಸಿಕೆ ತೆಗೆದುಕೊಳ್ಳಬೇಕಾಗುತ್ತದೆ. ಅಮೃತಸರ ವಿದ್ಯಾರ್ಥಿನಿ ಮಿಲೋನಿ ದೋಶಿ, ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಹೋದ ನಂತ್ರ ಡಬ್ಲ್ಯುಎಚ್ ಒ ಅನುಮೋದನೆ ನೀಡಿದ ಲಸಿಕೆಯ ಒಂದು ಡೋಸ್ ಪಡೆದಿದ್ದಾರೆ. ಎರಡೆರಡು ಲಸಿಕೆ ಪಡೆಯುವುದ್ರಿಂದ ಮತ್ತೊಂದು ಸಮಸ್ಯೆ ಕಾಡಬಹುದು ಎಂಬ ಭಯ ವಿದ್ಯಾರ್ಥಿಗಳನ್ನು ಕಾಡ್ತಿದೆ.

ಡಬ್ಲ್ಯುಎಚ್‌ಒ ಇದುವರೆಗೆ 8 ಲಸಿಕೆಗಳನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ. ಈ ಪೈಕಿ 3 ಲಸಿಕೆಗಳು ಅಮೆರಿಕದಲ್ಲಿ ತಯಾರಾಗಿದೆ. ಫಿಜರ್-ಬಯೋಟೆಕ್, ಮಾಡರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್‌ ಲಸಿಕೆ ಜೊತೆ ಕೋವಿಶೀಲ್ಡ್ ಮತ್ತು ಸಿನೋವಾಕ್ ಗೆ ಅನುಮೋದನೆ ಸಿಕ್ಕಿದೆ. ಅಮೆರಿಕಕ್ಕೆ ಚೀನಾದಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಬರ್ತಾರೆ. ಭಾರತ ಎರಡನೇ ಸ್ಥಾನದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...