ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಆಕೆಯ ಸಹೋದರಿ ರಂಗೋಲಿ ಚಂಡೇಲಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಪೋಸ್ಟ್ಗಳನ್ನ ಹಾಕಿದ್ದಕ್ಕಾಗಿ ನಡೆಯುತ್ತಿರುವ ವಿಚಾರಣೆಯ ಸಂಬಂಧ ತನಿಖಾ ಪ್ರಗತಿಯ ವರದಿಯನ್ನ ಸಲ್ಲಿಸುವಂತೆ ಮುಂಬೈ ಪೊಲೀಸರಿಗೆ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ದೇಶನ ನೀಡಿದೆ.
ದ್ವೇಷಪೂರಿತ ಪೋಸ್ಟ್ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಂಗನಾ ಸಹೋದರಿಯರ ವಿರುದ್ಧ ವಕೀಲರೊಬ್ಬರು ದಾಖಲಿಸಿದ್ದ ಖಾಸಗಿ ದೂರಿನ ಸಂಬಂಧ ಕಳೆದ ವರ್ಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ಸಂಬಂಧ ಡಿಸೆಂಬರ್ 5ನೇ ತಾರೀಖಿನ ಒಳಗೆ ವರದಿ ಸಲ್ಲಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಳೆದ ವರ್ಷ ಅಕ್ಟೋಬರ್ನಲ್ಲಿ ಅಂಬೋಲಿ ಪೊಲೀಸರಿಗೆ ಸೂಚನೆ ನೀಡಿತ್ತು.
ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಲಯ ನೀಡಿದ್ದ ಗಡುವಿನ ಒಳಗಾಗಿ ವರದಿಯನ್ನ ಸಲ್ಲಿಸುವಲ್ಲಿ ಪೊಲೀಸರು ವಿಫಲರಾಗಿದ್ದರು. ಬಳಿಕ ಈ ಅವಧಿಯನ್ನ ಜನವರಿ 5ನೇ ತಾರೀಖಿಗೆ ಮುಂದೂಡಲಾಗಿತ್ತು. ಆದರೆ ಈ ವೇಳೆಯಲ್ಲೂ ವರದಿ ಸಲ್ಲಿಸುವಲ್ಲಿ ಪೊಲೀಸರು ವಿಫಲರಾಗಿದ್ದರು.
ಒಂದೇ ಒಂದು ಟ್ವೀಟ್ನಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನ ಕಳೆದುಕೊಂಡ್ರಾ ಸಚಿನ್ ತೆಂಡೂಲ್ಕರ್....?
ಇದಾದ ಬಳಿಕ ಪೊಲೀಸರಿಗೆ ಫೆಬ್ರವರಿ 5ರಂದು ಹೊಸ ಗಡುವು ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಪೊಲೀಸರು ಪ್ರಕರಣ ಸಂಬಂಧ ಯಾವುದೇ ವರದಿಯನ್ನ ಕೋರ್ಟ್ಗೆ ಸಲ್ಲಿಸಿಲ್ಲ.