alex Certify ಕೋವಿಡ್ ಟೆಸ್ಟ್ ರಿಪೋರ್ಟ್: ಕೊರೋನಾ ನೆಗೆಟಿವ್ ಬಂದವರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಟೆಸ್ಟ್ ರಿಪೋರ್ಟ್: ಕೊರೋನಾ ನೆಗೆಟಿವ್ ಬಂದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಕೋವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದರೂ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಪರೀಕ್ಷೆಗೆ ಒಳಪಟ್ಟ ಜನರಿಗೆ ಎಸ್ಎಂಎಸ್ ಮೂಲಕ ಕೊರೋನಾ ನೆಗೆಟಿವ್ ವರದಿ ಬಂದರೂ ಮಾಹಿತಿ ನೀಡಲು ರಾಷ್ಟ್ರೀಯ ಆರೋಗ್ಯ ಅಭಿಯಾನ್ ಖಡಕ್ ಸೂಚನೆ ನೀಡಿ ಸುತ್ತೋಲೆ ಹೊರಡಿಸಿದೆ.

ಈ ಮೊದಲು ಪಾಸಿಟಿವ್ ಬಂದರೆ ಮಾತ್ರ ಎಸ್ಎಂಎಸ್ ಬರುತ್ತಿತ್ತು. ನೆಗೆಟಿವ್ ವರದಿ ಬಂದರೆ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ದೂರುಗಳು ಕೇಳಿ ಬಂದಿದ್ದವು. ನೆಗೆಟಿವ್ ಬಂದರೂ ಮಾಹಿತಿ ನೀಡಬೇಕೆಂದು ಹಲವರು ದೂರು ನೀಡಿದ್ದು ಹೀಗಾಗಿ ನೆಗೆಟಿವ್ ವರದಿ ಬಂದರೂ ಎಸ್ಎಂಎಸ್ ಮೂಲಕ ಮಾಹಿತಿ ತಿಳಿಸುವಂತೆ ಸೂಚಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...