alex Certify ದಂಗಾಗಿಸುತ್ತೆ 24 ಗಂಟೆಯಲ್ಲಿ ಸಿಕ್ಕ ಹೊಸ ಕೊರೊನಾ ಪ್ರಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ 24 ಗಂಟೆಯಲ್ಲಿ ಸಿಕ್ಕ ಹೊಸ ಕೊರೊನಾ ಪ್ರಕರಣ

ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗ್ತಿದೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಭೆ ನಡೆಸಲಿದ್ದು, ಸಭೆಗೂ ಮುನ್ನ ಸಿಕ್ಕ ಹೊಸ ಕೊರೊನಾ ಪ್ರಕರಣಗಳು ಮತ್ತಷ್ಟು ಆತಂಕ ಹೆಚ್ಚಿಸಿದೆ. ಲಾಕ್ ಡೌನ್ ಮೇ ಅಂತ್ಯದವರೆಗೆ ಖಚಿತ ಎನ್ನಲಾಗ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 4213 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

ಕೊರೊನಾ ವೈರಸ್ ಗೆ ಕಳೆದ 24 ಗಂಟೆಯಲ್ಲಿ 104 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಾರಿ ದೇಶದಲ್ಲಿ 67152 ಮಂದಿಗೆ ಕೊರೊನ ಸೋಂಕು ಕಾಣಿಸಿಕೊಂಡಿದೆ. 44029 ಸಕ್ರಿಯ ಪ್ರಕರಣವಿದೆ. ದೇಶದಲ್ಲಿ ಒಟ್ಟಾರೆ 2206 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 20916 ಮಂದಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ.

ದೇಶದಲ್ಲಿ ಅತಿ ಹೆಚ್ಚು ಪ್ರಕರಣ ಮಹಾರಾಷ್ಟ್ರದಲ್ಲಿ ಕಂಡು ಬಂದಿದೆ. ಮಹಾರಾಷ್ಟ್ರದಲ್ಲಿ 22171 ಪ್ರಕರಣವಿದೆ. ಕರ್ನಾಟಕ 13ನೇ ಸ್ಥಾನದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...