alex Certify ಇಂದಿನಿಂದ ಮೇ 31ರವರೆಗೆ ಮಾಡಲು ಸಾಧ್ಯವಿಲ್ಲ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ಮೇ 31ರವರೆಗೆ ಮಾಡಲು ಸಾಧ್ಯವಿಲ್ಲ ಈ ಕೆಲಸ

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಇಂದಿನಿಂದ ಲಾಕ್ ಡೌನ್ 4 ಜಾರಿಗೆ ಬಂದಿದೆ. ಈ ಬಾರಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗಿದೆ. ಕೆಲ ಸೇವೆಗಳ ಸಡಿಲಿಕೆಗೆ ರಾಜ್ಯ ಸರ್ಕಾರಗಳಿಗೆ ನಿರ್ಧಾರ ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ. ಆದ್ರೆ ಆರಂಭದ ಲಾಕ್ ಡೌನ್ ನಂತೆ ಕೆಲ ನಿಯಮಗಳು ಮೇ 31 ರ ವರೆಗೂ ಕಟ್ಟುನಿಟ್ಟಾಗಿ ಜಾರಿಯಲ್ಲಿರಲಿವೆ.

ತಡರಾತ್ರಿಯ ವಿಹಾರ, ಪಾರ್ಟಿ ಅಥವಾ ಲಾಂಗ್ ಡ್ರೈವ್ ಗೆ ಅನುಮತಿ ನೀಡಲಾಗಿಲ್ಲ. ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ ಮನೆಯಿಂದ ಹೊರಬರುವಂತಿಲ್ಲ.

ವಯಸ್ಸಾದವರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಯಾವುದೇ ಸಮಯದಲ್ಲಿ ಮನೆಯಿಂದ ಹೊರಹೋಗಲು ಸಾಧ್ಯವಾಗುವುದಿಲ್ಲ. ಅವರು ಕೊರೊನಾ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು.

ಬೇರೆ ರಾಜ್ಯ ಹಾಗೂ ವಿದೇಶಕ್ಕೆ ತೆರಳಲು ಸಾಧ್ಯವಿಲ್ಲ. ದೇಶೀಯ-ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಶುರುವಾಗಿಲ್ಲ.

ಮೇ 18 ರಿಂದ ಮೇ 31ರವರೆಗೆ ಯಾವುದೇ ಪ್ರಯಾಣಿಕರ ರೈಲು ಓಡುವುದಿಲ್ಲ. ವಿಶೇಷ ರೈಲುಗಳು ಮಾತ್ರ ಓಡಾಟ ನಡೆಸಲಿವೆ.

ಇನ್ನು ಮೆಟ್ರೋ ನಗರಗಳಲ್ಲಿ ಮೆಟ್ರೋಗಳು ಕೂಡ ಮೇ 31ರವರೆಗೆ ಓಡಾಟ ನಡೆಸುವುದಿಲ್ಲ.

ರೆಸ್ಟೋರೆಂಟ್‌ಗಳು, ಬಾರ್‌ಗಳು, ಪಬ್‌ಗಳು ಮತ್ತು ಕಾಫಿ ಶಾಪ್ ನಲ್ಲಿ ಪಾರ್ಟಿ ಮಾಡಲು ಅವಕಾಶವಿಲ್ಲ. ಹೊಟೇಲ್ ಗೆ ಹೋಗಿ ಆಹಾರ ಸೇವನೆ ಕೂಡ ಸಾಧ್ಯವಿಲ್ಲ. ಹೊಟೇಲ್ ತಿಂಡಿಗಳನ್ನು ಮನೆಗೆ ಪಾರ್ಸಲ್ ತೆಗೆದುಕೊಂಡು ಹೋಗಬಹುದು.

ಮನೆಯಲ್ಲಿದ್ದು ಬೊಜ್ಜು ಹೆಚ್ಚಾಗಿರುವವರಿಗೂ ಬ್ಯಾಡ್ ನ್ಯೂಸ್ ಇದೆ. ಮೇ 31ರವರೆಗೆ ಜಿಮ್ ತೆರೆಯುವಂತಿಲ್ಲ.

ಮೇ 31ರವರೆಗೂ ಯಾವುದೇ ಶಾಪಿಂಗ್ ಮಾಲ್ ಗಳು ತೆರೆಯುವುದಿಲ್ಲ.

ಹಾಗೆ ಶಾಲಾ-ಕಾಲೇಜುಗಳ ಬಾಗಿಲು ತೆರೆಯುವಂತಿಲ್ಲ. ಕೋಚಿಂಗ್ ಕ್ಲಾಸ್ ಕೂಡ ಬಂದ್ ಆಗಿರಲಿದೆ.

ಮೇ 31 ರವರೆಗೆ ದೇವಾಲಯಗಳು, ಮಸೀದಿಗಳು, ಚರ್ಚುಗಳು ಮತ್ತು ಗುರುದ್ವಾರಗಳು ಮುಚ್ಚಿರುತ್ತವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...