ನವದೆಹಲಿ: ಮಧುಮೇಹದಿಂದ ಬಳಲುತ್ತಿರುವವರಿಗೆ ಕೊರೋನಾ ಸೋಂಕು ತಗುಲಿದರೆ ಅಪಾಯದ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮಧುಮೇಹ ಇರುವವರಿಗೆ ಕೊರೋನಾ ಸೋಂಕು ತಗಲಿದರೆ ಅಪಾಯದ ಸಾಧ್ಯತೆ ಶೇಕಡ 50 ರಷ್ಟು ಇರುತ್ತದೆ. ಇದರಿಂದ ಹೊರಬರಲು ಮಧುಮೇಹ ಇರುವವರು ಮನೆಯಲ್ಲಿ ಮಿತ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮಗಳನ್ನು ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಟೈಪ್ 1 ಮತ್ತು ಟೈಪ್ 2 ಮಾದರಿಯ ಮಧುಮೇಹ ಇರುವವರಿಗೆ ಕೊರೋನಾ ಸೋಂಕು ತಗುಲಿದಲ್ಲಿ ಸಾವನ್ನಪ್ಪುವ ಸಾಧ್ಯತೆ ಶೇಕಡ 50 ರಷ್ಟು ಇರುತ್ತದೆ. ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಮಿತವಾಗಿ ಪರಿಶೀಲಿಸಿಕೊಂಡು ಅದಕ್ಕೆ ಅನುಸಾರ ಆಹಾರ ಸೇವಿಸಿ ವ್ಯಾಯಾಮ ಮಾಡುವಂತೆ ದೆಹಲಿ ಆಸ್ಪತ್ರೆಯ ವೈದ್ಯ ಡಾ. ನಿಖಿಲ್ ಟಂಡನ್ ಹೇಳಿದ್ದಾರೆ.