alex Certify ಕೊರೋನಾ ವೈರಸ್ ದಶಾವತಾರ: ಬೆಚ್ಚಿ ಬೀಳಿಸುವಂತಿದೆ ಅಧ್ಯಯನದಲ್ಲಿ ಬಯಲಾದ ʼರಹಸ್ಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ವೈರಸ್ ದಶಾವತಾರ: ಬೆಚ್ಚಿ ಬೀಳಿಸುವಂತಿದೆ ಅಧ್ಯಯನದಲ್ಲಿ ಬಯಲಾದ ʼರಹಸ್ಯʼ

ನವದೆಹಲಿ:  10 ವಿಧದಲ್ಲಿ ಮಾರಕ ಕೊರೋನಾ ವೈರಸ್ ರೂಪಾಂತರ ಹೊಂದುತ್ತದೆ ಎನ್ನುವ ಆತಂಕದ ಮಾಹಿತಿ ಹೊರ ಬಿದ್ದಿದೆ. ಇದನ್ನು ಪತ್ತೆ ಹಚ್ಚುವುದೇ ಸವಾಲಿನ ಕೆಲಸವಾಗಿದೆ. A2a ವಿಧದ ಕೊರೋನಾ ವೈರಸ್ ಬಹುತೇಕ ಎಲ್ಲಾ ದೇಶಗಳಲ್ಲೂ ಇದೆ ಎನ್ನುವುದು ಜನೋಮಿಕ್ಸ್ ಸಂಸ್ಥೆಯ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿರುವ ಜನೋಮಿಕ್ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಗೊತ್ತಾಗಿದೆ. ನಿಧಾನ್ ಬಿಸ್ವಾಸ್ ಮತ್ತು ಪಾರ್ಥಾ ಮಜುಂದಾರ್ ಸಂಶೋಧನೆ ಕೈಗೊಂಡಿದ್ದು, 10 ವಿಧದಲ್ಲಿ ಕೊರೋನಾ ವೈರಸ್ ರೂಪಾಂತರ ಹೊಂದುತ್ತಿರುವುದು ಗೊತ್ತಾಗಿದೆ.

A2a ಕೊರೋನಾ ವೈರಸ್ ನೇರವಾಗಿ ಶ್ವಾಸಕೋಶಕ್ಕೆ ಅಟ್ಯಾಕ್ ಮಾಡುತ್ತದೆ. A2a ರೂಪಾಂತರದ ಕೊರೋನಾ ವೈರಸ್ ನಿಂದ ಹೊಸ ಆತಂಕ ಸೃಷ್ಠಿಯಾಗಿದೆ. ಹತ್ತು ವರ್ಷಗಳ ಹಿಂದೆ ಸಾರ್ಸ್ ವೈರಸ್ ಕಂಡು ಬಂದಿದ್ದು, ಅದು ಶ್ವಾಸಕೋಶ ಪ್ರವೇಶ ಮಾಡುತ್ತಿತ್ತು. ಸಾರ್ಸ್ ವೈರಸ್ A2a ವೈರಸ್ ನಷ್ಟು ಪ್ರಬಲವಾಗಿಲ್ಲ. ಆದರೆ A2a ವೈರಸ್ ಬಹಳ ಪ್ರಬಲವಾಗಿದೆ.

ಭಾರತದಲ್ಲಿ 35 ಜನರಿಗೆ ಆರ್.ಎನ್.ಎ. ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 16 ಜನರಲ್ಲಿ A2a ವೈರಸ್ ಪತ್ತೆಯಾಗಿದೆ. ಭಾರತದಲ್ಲಿ ಶೇಕಡ 47 ರಷ್ಟು ಜನರಲ್ಲಿ A2a ವೈರಸ್ ಪತ್ತೆಯಾಗಿದೆ. ಉಳಿದವರಲ್ಲಿ ಎ 3, ಒ, ಬಿ ರೂಪಾಂತರದ ವೈರಸ್ ಪತ್ತೆಯಾಗಿದೆ. 10 ವಿಧದ ವೈರಸ್ ಒ ವೈರಸ್ ನಿಂದ ರೂಪಾಂತರ ಹೊಂದಿವೆ. ಮಾರ್ಚ್ ತಿಂಗಳ ಬಳಿಕ A2a ವೈರಸ್ ಬೆಳವಣಿಗೆ ಆಗಿದೆ. ಇದು ನೇರವಾಗಿ ಶ್ವಾಸಕೋಶಕ್ಕೆ ಅಟ್ಯಾಕ್ ಮಾಡುತ್ತದೆ. ಜಾಗತಿಕವಾಗಿ 55 ದೇಶಗಳ 3636 ಆರ್.ಎನ್.ಎ. ಪರೀಕ್ಷೆ ಮಾಡಲಾಗಿದ್ದು ಇವರಲ್ಲಿ 1848 ಮಂದಿಯಲ್ಲಿ ಎ2ಎ ವೈರಸ್ ಕಂಡು ಬಂದಿದೆ. ಜಾಗತಿಕವಾಗಿ ಶೇಕಡ 50 ಜನರಲ್ಲಿ ಎ2ಎ ವೈರಸ್ ಪತ್ತೆಯಾಗಿದೆ. ಯಾವ ವಿಧಧ ವೈರಸ್ ಪ್ರಬಲವಾಗಿದೆ ಎನ್ನುವುದು ಗೊತ್ತಾದರೆ. ವ್ಯಾಕ್ಸಿನ್ ತಯಾರಿ ಮಾಡುವುದಕ್ಕೆ ಸುಲಭವಾಗುತ್ತದೆ.

ಆದರೆ ಕ್ಷಣಕ್ಷಣಕ್ಕೂ ರೂಪಾಂತರ ಹೊಂದುತ್ತಿದೆ. ರೋಗಿಗಳಲ್ಲಿ ವಿಭಿನ್ನ ಲಕ್ಷಣ ಕಾಣಿಸುತ್ತಿರುವುದರಿಂದ ವ್ಯಾಕ್ಸಿನ್ ಕಂಡು ಹಿಡಿಯುವುದು ಸವಾಲಿನ ಕೆಲಸವಾಗಿದೆ. ಒಂದು ವಾರದ ಹಿಂದೆ ಐಸಿಎಂಆರ್ ವಿಜ್ಞಾನಿ ಗಂಗಾ ಖೇಡ್ಕರ್ ಭಾರತದಲ್ಲಿ ಕಂಡು ಬಂದ ಕೊರೋನಾ ರೂಪಾಂತರ ಹೊಂದುವುದಿಲ್ಲ ಎಂದು ಹೇಳಿದ್ದರು. ಈ ವೈರಸ್ ಒಂದೇ ರೀತಿ ಇದ್ದಾಗ ಸೂಕ್ತ ಔಷಧ ಕಂಡು ಹಿಡಿಯುವುದು ಸುಲಭವಾಗುತ್ತದೆ ಎನ್ನಲಾಗಿತ್ತು. ಆದರೆ, ಇದು 10 ಬಗೆಯ ರೂಪಾಂತರ ಹೊಂದುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...