alex Certify ದೇಶದಲ್ಲಿ ಕೊರೋನಾ ಆತಂಕದ ನಡುವೆಯೂ ಹೊಸ ಬೆಳಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿ ಕೊರೋನಾ ಆತಂಕದ ನಡುವೆಯೂ ಹೊಸ ಬೆಳಕು

ನವದೆಹಲಿ: ಕೊರೋನಾ ಸೋಂಕು ತಡೆಗೆ ದೇಶವ್ಯಾಪಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಮಾರ್ಚ್ 25 ರಿಂದ ಜಾರಿಯಾದ ಲಾಕ್ ಡೌನ್ ಗುರುವಾರಕ್ಕೆ 30 ದಿನ ಪೂರೈಸಿದೆ.

ಲಾಕ್ ಡೌನ್ ನಿಂದಾಗಿ ಕೋರೋನಾ ಸೋಂಕಿತರ ಚೇತರಿಕೆಯ ಬೇಗ ದ್ವಿಗುಣಗೊಂಡಿದೆ. ವ್ಯಾಪಕವಾಗಿ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿದೆ. ಸೋಂಕಿತರ ಚೇತರಿಕೆಯ ಪ್ರಮಾಣ ಕಳೆದ 10 ದಿನಗಳಲ್ಲಿ ಡಬಲ್ ಆಗಿದೆ ಎಂದು ಕೇಂದ್ರ ಆರೋಗ್ಯ ಮಂತ್ರಾಲಯ ತಿಳಿಸಿದೆ.

ಲಾಕ್ಡೌನ್ ಜಾರಿಯಾದ ನಂತರ ಕೋರೋನಾ ಪರೀಕ್ಷಾ ಪ್ರಮಾಣ 24 ಪಟ್ಟು ಜಾಸ್ತಿಯಾಗಿದ್ದು ಹೊಸ ಸೋಂಕು ಪ್ರಮಾಣ 16 ಪಟ್ಟು ಹೆಚ್ಚಾಗಿದೆ. 30 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಕೊರೋನಾ ಸೋಂಕು ಹರಡುವಿಕೆ ಪ್ರಮಾಣ ತಡೆಯುವಲ್ಲಿ ಮತ್ತು ಸೋಂಕು ವಿವರಿಸುವಲ್ಲಿ ಬಹುತೇಕ ಯಶಸ್ವಿ ಆಗಿದ್ದೇವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ದೇಶದ 78 ಜಿಲ್ಲೆಗಳಲ್ಲಿ ಕಳೆದ 14 ದಿನಗಳ ಅವಧಿಯಲ್ಲಿ ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. 9 ರಾಜ್ಯಗಳ 33 ಜಿಲ್ಲೆಗಳು ಸೇರಿ 78 ಜಿಲ್ಲೆಗಳಲ್ಲಿ 14 ದಿನಗಳ ಅವಧಿಯಲ್ಲಿ ಒಂದು ಪ್ರಕರಣ ವರದಿಯಾಗಿಲ್ಲ. ಸೋಂಕು ವ್ಯಾಪಕವಾಗಿ ಹರಡುವುದಕ್ಕೆ ಬ್ರೇಕ್ ಬಿದ್ದಿದ್ದು ಸೋಂಕಿತರ ಚೇತರಿಕೆ ಪ್ರಮಾಣ ಡಬಲ್ ಆಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...