alex Certify ನನ್ನನ್ನು ಎನ್ ಕೌಂಟರ್ ಮಾಡ್ತಾರೆ, ರಕ್ಷಣೆ ಕೊಡಿ ಎಂದ ಸಬ್ ಇನ್ಸ್ ಪೆಕ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನನ್ನು ಎನ್ ಕೌಂಟರ್ ಮಾಡ್ತಾರೆ, ರಕ್ಷಣೆ ಕೊಡಿ ಎಂದ ಸಬ್ ಇನ್ಸ್ ಪೆಕ್ಟರ್

ನವದೆಹಲಿ: ಕಾನ್ಪುರದಲ್ಲಿ 8 ಪೊಲೀಸರ ಹತ್ಯೆ ಮಾಡಿದ್ದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಪೊಲೀಸರ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದಾನೆ.

ಈತನಿಗೆ ಪ್ರಮುಖ ಮಾಹಿತಿ ಒದಗಿಸಿದ್ದ ಆರೋಪದ ಮೇಲೆ ಬಂಧಿತರಾಗಿರುವ ಪೊಲೀಸ್ ಇನ್ಸ್ ಪೆಕ್ಟರ್ ರಕ್ಷಣೆ ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಕೃಷ್ಣ ಕುಮಾರ್ ಶರ್ಮಾ ಪರವಾಗಿ ಅವರ ಪತ್ನಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ವಿಕಾಸ್ ದುಬೆ ಮತ್ತು ಆತನ ಸಹಚರರ ವಿರುದ್ಧ ಎನ್ ಕೌಂಟರ್ ನಡೆಸಿದಂತೆ ತಮ್ಮ ಮೇಲೆ ಎನ್ ಕೌಂಟರ್ ನಡೆಯಬಹುದು ಎಂದು ಆತಂಕ ವ್ಯಕ್ತಪಡಿಸಿ ರಕ್ಷಣೆ ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.

ವಿಕಾಸ್ ದುಬೆಗೆ ಮಾಹಿತಿ ರವಾನಿಸಿದ್ದ ಆರೋಪದ ಮೇಲೆ ಕೃಷ್ಣಕುಮಾರ್ ಶರ್ಮಾ ಮತ್ತು ಇತರ ಮೂವರನ್ನು ಸಸ್ಪೆಂಡ್ ಮಾಡಲಾಗಿದೆ. ಎನ್  ಕೌಂಟರ್ ಆತಂಕಕ್ಕೆ ಒಳಗಾಗಿರುವ ಕೃಷ್ಣಕುಮಾರ್, ಪೊಲೀಸರು ತಮ್ಮನ್ನು ಮುಗಿಸಬಹುದು ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...